ಮಡಿಕೇರಿ, ಜೂ. 24: ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸರಣಾ ಮಂತ್ರಾಲಯ ಹಾಡು ಮತ್ತು ನಾಟಕ ವಿಭಾಗದೊಂದಿಗೆ ನೋಂದಾಯಿಸಿಕೊಳ್ಳುವದಕ್ಕಾಗಿ ಸಮ್ಮತಿಯುಳ್ಳ ಖಾಸಗಿ ಸಾಂಸ್ಕøತಿಕ ತಂಡಗಳು ಮತ್ತು ಸಕಾಲಿಕ ಕಲಾವಿದರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಯ್ಕೆಯಾದ ಹಾಡು ಮತ್ತು ನಾಟಕ, ಸಕಾಲಿಕ ಕಲಾವಿದರಿಗೆ ಗೌರವಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ (ತಿತಿತಿ.ಜಜಿಠಿ.ಟಿiಛಿ.iಟಿ) ದೂ. 08272-225470 (ನೆಹರೂ ಯುವ ಕೇಂದ್ರ ಕಚೇರಿ).

ಅರ್ಜಿ ಸಲ್ಲಿಸಲು ತಾ. 26 ಕೊನೆಯ ದಿನವಾಗಿದೆ. ಆಯ್ಕೆಯಾದ ತಂಡಗಳಿಗೆ/ಕಲಾವಿದರಿಗೆ ಕಾರ್ಯಕ್ರಮಕ್ಕನುಗುಣವಾಗಿ ಈ ಇಲಾಖೆಯು ಸಂಭಾವನೆ ನೀಡಲಿರುತ್ತದೆ ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ತಿಳಿಸಿದ್ದಾರೆ.

ಸಹಾಯ ಧನ ಸೌಲಭ್ಯಕ್ಕೆ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2017-18ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ, ಶ್ರಮಶಕ್ತಿ ಸಾಲ ಹಾಗೂ ಸಹಾಯ ಧನ ಯೋಜನೆ, ಮೈಕ್ರೋಲೋನ್ ಯೋಜನೆ, ಪಶು ಸಂಗೋಪನಾ ಯೋಜನೆ, ಪ್ರವಾಸಿ ಸಾಲ ಯೋಜನೆ (ಕೇರಳ ಮಾದರಿ), ಅಲ್ಪಸಂಖ್ಯಾತರ ಟ್ಯಾಕ್ಸಿ ಕಲ್ಯಾಣ ಯೋಜನೆ ಹೀಗೆ ವಿವಿಧ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯ ಧನಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ ಮೇಲ್ಪಟ್ಟು 55 ವರ್ಷದೊಳಗೆ ವಯೋಮಿತಿಯಿರಬೇಕು. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರುವವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವದಿಲ್ಲ. ಅರ್ಜಿ ಸಲ್ಲಿಸಲು ಆಧಾರ್ ಪ್ರತಿಯು ಕಡ್ಡಾಯವಾಗಿರುತ್ತದೆ. ಈಗಾಗಲೇ ಸಾಲ ಮನ್ನಾ ಆಗಿರುವ ಫಲಾನುಭವಿಗಳಿಗೆ ಹೊಸದಾಗಿ ಸಾಲ ನೀಡಲಾಗುವದಿಲ್ಲ. ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ. 1,03 ಲಕ್ಷ ಒಳಗಿರಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವಾರ್ಡ್ ನಂ: 7, ರಾಮಮಂದಿರದ ಹಿಂಭಾಗ, ಹೊಟೇಲ್ ಹಿಲ್-ವ್ಯೂ ಹತ್ತಿರ, ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. 571201 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಅರ್ಜಿ ಪಡೆಯಬಹುದಾಗಿದೆ. ಅರ್ಜಿ ಪಡೆದುಕೊಳ್ಳಲು ಜುಲೈ 20 ಕಡೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜುಲೈ 31 ಕಡೆಯ ದಿನವಾಗಿದೆ. ಕಚೇರಿ ದೂರವಾಣಿ ಸಂಖ್ಯೆ: 08272-220449, ಹಾಗೂ ನಿಗಮದ ವೆಬ್‍ಸೈಟ್ ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ ನಲ್ಲಿಯು ಸಹ ಅರ್ಜಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್. ನಾಗೇಂದ್ರ ತಿಳಿಸಿದ್ದಾರೆ.

ಯುವ ಸಂಘ ಪ್ರಶಸ್ತಿಗೆ

ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲಾ ನೆಹರೂ ಯುವ ಕೇಂದ್ರ ಈ ವರ್ಷ 2016-17ನೇ ಸಾಲಿನ ಜಿಲ್ಲಾ ಯುವ ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಘ-ಸಂಸ್ಥೆಗಳ ನೋಂದಣಿ ಅಧಿನಿಯಮ 1960ರ ಪ್ರಕಾರ ನೋಂದಾವಣೆಯಾಗಿ, ನೆಹರೂ ಯುವ ಕೇಂದ್ರದಲ್ಲಿ ಮಾನ್ಯತೆ ಪಡೆದು ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಕ್ರಿಯಾತ್ಮಕವಾದ ಚಟುವಟಿಕೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸಮುದಾಯಿಕ, ಗ್ರಾಮದ ಅಭಿವೃದ್ಧಿಗಾಗಿ ನಿಸ್ವಾರ್ಥತೆಯಿಂದ ಸೇವೆಯನ್ನು ಸಲ್ಲಿಸಿರುವ ಗ್ರಾಮೀಣ ಯುವಕ ಸಂಘ, ಯುವತಿ ಮಂಡಳಿಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ನೀಡಲಾಗುವದು. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಸಂಘ-ಮಂಡಳಿ ರಾಜ್ಯ ಮಟ್ಟದ ಸ್ಪರ್ಧೆಗೆ ತಾನಾಗಿ ಅರ್ಹತೆ ಪಡೆಯುತ್ತದೆ.

ಯುವ ಸಂಘಗಳು 2016ರ ಏಪ್ರಿಲ್ 1 ರಿಂದ 2017ರ ಮಾರ್ಚ್ 31 ರ ಅವಧಿಯಲ್ಲಿ ಸಮುದಾಯದ ಬೆಳೆವಣಿಗೆಗೆ ಸಲ್ಲಿಸಿರುವ ಸೇವಾ ಕಾರ್ಯಗಳ ದೃಡೀಕರಣ ಪತ್ರಗಳು, ಭಾವಚಿತ್ರ ಮತ್ತಿತರ ವಿವರದೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳ ಕಾರ್ಯಾಲಯ, ನೆಹರೂ ಯುವ ಕೇಂದ್ರ, 2ನೇ ಮಹಡಿ, ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಕಟ್ಟಡ, ಹೊಸ ಬಡಾವಣೆ, ಮಡಿಕೇರಿ, ಇವರಿಂದ ಕಾರ್ಯಾಲಯದ ಕೆಲಸದ ವೇಳೆಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ದಾಖಲೆಗಳೊಂದಿಗೆ ಜುಲೈ 31 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗೆ ದೂ. 08272-225470 ನ್ನು ಸಂಪರ್ಕಿಸಬಹುದು ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ತಿಳಿಸಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2017-18ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ವಿವಿಧ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯ ಧನಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಯೋಜನೆ: ಈ ಯೋಜನೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವ್ಯಾಪಾರ, ಕೈಗಾರಿಕೆ, ಕೃಷಿ ಮತ್ತು ಸೇವಾವಲಯದಲ್ಲಿ ಬರುವ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಘಟಕ ವೆಚ್ಚ ರೂ. 1 ಲಕ್ಷದೊಳಗೆ ಇರುವ ಚಟುವಟಿಕೆಗಳಿಗೆ ಶೇ. 50 ಅಥವಾ ಗರಿಷ್ಠ ಮಿತಿ ರೂ. 35 ಸಾವಿರ ಸಹಾಯ ಧನ, ಹಾಗೂ ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಟುವಟಿಕೆಗಳಿಗೆ ಘಟಕ ವೆಚ್ಚದ ಶೇ. 33 ಅಥವಾ ಗರಿಷ್ಠ ಮಿತಿ ರೂ. 2 ಲಕ್ಷದ ಸಹಾಯಧನ ನೀಡಲಾಗುವದು. ಈ ಯೋಜನೆಯಡಿ ಜಿಲ್ಲೆಗೆ ಒಟ್ಟು ಭೌತಿಕ 41 ಆರ್ಥಿಕ ರೂ. 30.85 ಗುರಿ ನಿಗದಿಪಡಿಸಿದೆ.

ಗಂಗಾ ಕಲ್ಯಾಣ ನೀರಾವರಿ ಯೋಜನೆ: ಈ ಯೋಜನೆಯಡಿಯಲ್ಲಿ ಸಣ್ಣ ರೈತರಿಗೆ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 1 ರಿಂದ 5 ಎಕರೆ ಒಳಗಿರುವ ಖುಷ್ಕಿ ಜಮೀನುಗಳಿಗೆ ಉಚಿತವಾಗಿ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಡುವ ಮುಖೇನ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಘಟಕ ವೆಚ್ಚ 2 ಲಕ್ಷಗಳಾಗಿರುತ್ತವೆ. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 26 ಆರ್ಥಿಕ ಗುರಿ 52 ಲಕ್ಷಗಳನ್ನು ನಿಗದಿಪಡಿಸಿದೆ.

ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ: ಈ ಯೋಜನೆಯಡಿ ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಬಿ.ಇ, ಎಂ.ಬಿ.ಬಿ.ಎಸ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಎಂ.ಡಿ, ಬಿಫಾರ್ಮ, ಡಿ.ಎಡ್, ಐಟಿಐ, ಡಿಪ್ಲೋಮಾ, ಬಿಎಸ್‍ಸಿ-ನರ್ಸಿಂಗ್, ಬಿ.ಡಿ.ಎಸ್ ಬಿ.ಬಿ.ಎಂ, ಬಿ.ಎಡ್, ಎಂ.ಎ, ಪಿಹೆಚ್.ಡಿ, ಎಂ.ಕಾಂ, ಎಂಎಸ್‍ಸಿ, ಎಂಫಾರ್ಮಾ, ಎಲ್.ಎಲ್.ಬಿ, ಹಾಗೂ ಇತರೇ ವೃತ್ತಿಪರ ಕೋರ್ಸ್‍ಗಳಿಗೆ ರೂ. 5 ಸಾವಿರಗಳಿಂದ ವ್ಯಾಸಂಗಕ್ಕೆ ಅನುಗುಣವಾಗಿ 75 ಸಾವಿರಗಳವರೆಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಸಾಲಕ್ಕೆ ಶೇ. 2 ರಂತೆ ಸೇವಾ ಶುಲ್ಕ ಪಡೆಯಲಾಗುವದು. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ 273 ಗುರಿ ನಿಗದಿಪಡಿಸಲಾಗಿದೆ. ಅರ್ಜಿದಾರರ ವಾರ್ಷಿಕ ಆದಾಯ ರೂ. 6 ಲಕ್ಷಗಳ ಒಳಗಿರಬೇಕು. ಔಟಿಟiಟಿe ಮುಖೇನ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ/ಚಿಡಿivu2