ಮಡಿಕೇರಿ, ಜೂ.23: ಮಡಿಕೇರಿ ನಗರದಲ್ಲಿ ಹವಮಾನ ವರದಿಯಂತೆ ಮುಂದಿನ ದಿನಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವದಾಗಿ ತಿಳಿದು ಬಂದಿದ್ದು, ಪ್ರಯುಕ್ತ ನಗರದಲ್ಲಿ ಬೆಟ್ಟಗುಡ್ಡ, ಎತ್ತರ, ತಗ್ಗು ಪ್ರದೇಶಗಳಲ್ಲಿ, ಮರಗಳ ಕೆಳಭಾಗದಲ್ಲಿ ಇರುವಂತಹ ಮನೆಗಳಲ್ಲಿ ವಾಸಿಸುತ್ತಿರುವವರು ತಾವು ವಾಸಿಸುತ್ತಿರುವ ಮನೆ ಶಿಥಿಲಗೊಂಡಿದ್ದಲ್ಲಿ ಅಥವಾ ಸುರಕ್ಷತೆ ಇಲ್ಲದೇ ಇದ್ದಲ್ಲಿ ಸುರಕ್ಷತೆ ದೃಷ್ಟಿಯಿಂದ ಕೂಡಲೇ ಈ ಮನೆಗಳನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ತೆರಳಲು ಕ್ರಮವಹಿಸುವದು. ಇಲ್ಲದಿದ್ದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸಮುದಾಯ ಭವನಗಳನ್ನು ತಾತ್ಕಾಲಿಕವಾಗಿ ಗಂಜೀಕೇಂದ್ರವನ್ನಾಗಿ ತೆರೆಯಲಾಗಿದ್ದು, ಸಮುದಾಯ ಭವನದ ಮುಂದೆ ತೋರಿಸಿದ ಪ್ರದೇಶ ವ್ಯಾಪ್ತಿಗೆ ಸುರಕ್ಷತೆ ದೃಷ್ಟಿಯಿಂದ ತಾತ್ಕಾಲಿಕ ಆಸರೆ ಪಡೆಯಲು ಇಚ್ಛಿಸುವವರು ಗಂಜೀಕೇಂದ್ರದಲ್ಲಿ ತಾತ್ಕಾಲಿಕ ಆಸರೆ ಪಡೆಯಬಹುದಾಗಿದೆ.

ಗಂಜೀಕೇಂದ್ರ ಹಾಗೂ ಗಂಜೀಕೇಂದ್ರ ವ್ಯಾಪ್ತಿಗೆ ಬರುವ ಪ್ರದೇಶ/ಬಡಾವಣೆ ಈ ಸಮುದಾಯ ಭವನ ವ್ಯಾಪ್ತಿಗೆ ಬರುವ ಪ್ರದೇಶಗಳ ವಿವರ ಇಂತಿದೆ: ಶ್ರೀರಾಮ ಸೇವಾ ಸಮಿತಿ, ಮಲ್ಲಿಕಾರ್ಜುನಗರ, ಮಡಿಕೇರಿ(ಮಲ್ಲಿಕಾರ್ಜುನನಗರ, ಭಗವತಿನಗರ, ರಾಣಿಪೇಟೆ, ಐಟಿಐ ಹಿಂಭಾಗ, ಎಫ್.ಎಂ.ಸಿ. ಕಾಲೇಜು, ವಿದ್ಯಾನಗರ, ಕಾನ್ವೆಂಟ್ ಸ್ಕೂಲ್ ಪ್ರದೇಶ), ಗ್ರಾಮಾಭಿವೃದ್ಧಿ ಸಮಿತಿ, ಕುಂಬಳಗೇರಿ ಉಕ್ಕುಡ, ಮಡಿಕೇರಿ (ತ್ಯಾಗರಾಜ ಕಾಲೋನಿ, ಗದ್ದಿಗೆ, ಗದ್ದಿಗೆ ಹಿಂಭಾಗ, ಆಜಾದ್‍ನಗರ, ಉಕ್ಕುಡ, ರಾಜರಾಜೇಶ್ವರಿನಗರ, ಸಂಪಿಗೆ ಕಟ್ಟೆ), ಅನ್ನಪೂರ್ಣೇಶ್ವರಿ ಸಮಿತಿ, ಅಶೋಕಪುರ, ಮಡಿಕೇರಿ (ಅಶೋಕಪುರ, ಕನ್ನಂಡಬಾಣೆ, ಚೈನ್‍ಗೇಟ್,

(ಮೊದಲ ಪುಟದಿಂದ) ರಾಘವೇಂದ್ರ ದೇವಾಲಯಗಳ ಡಿ.ಎಫ್.ಓ. ಬಂಗ್ಲೆ ಬಳಿ), ಅರುಣೋದಯ ಸಮುದಾಯ ಭವನ, ಇಂದಿರಾನಗರ, ಮಡಿಕೇರಿ (ಚಾಮುಂಡೇಶ್ವರಿನಗರ ಮತ್ತು ಇಂದಿರಾನಗರ), ಶ್ರೀ ಆದಿಪರಾಶಕ್ತಿ ಸಮುದಾಯಭವನ ಮಂಗಳಾದೇವಿ ನಗರ, ಮಡಿಕೇರಿ (ಮೂರ್ನಾಡು ರಸ್ತೆ, ಮಂಗಳಾದೇವಿ ನಗರ, ಮಂಗಳೂರು ರಸ್ತೆ, ಗುಂಡೂರಾವ್ ಕಾಂಪೌಂಡ್), ಡಾ.ಅಂಬೇಡ್ಕರ್ ಶತಮಾನೋತ್ಸವ ಭವನ, ಸುದರ್ಶನ ಸರ್ಕಲ್, ಮಡಿಕೇರಿ(ಪುಟಾಣಿನಗರ, ದೇಚೂರು, ಬಾಣಿಮೊಟ್ಟೆ, ಅಶ್ವತ್‍ಕಟ್ಟೆ, ಜಲಾಶಯ ಬಡಾವಣೆ, ಶಾಂತಿನೀಕೇತನ) ಹಾಗೂ ಎಸ್.ಜೆ.ಎಸ್.ಆರ್.ವೈ.ಸಮುದಾಯ ಭವನ, ಚಾಮುಂಡೇಶ್ವರಿ ನಗರ, ಮಡಿಕೇರಿ(ಚಾಮುಂಡೇಶ್ವರಿನಗರ ದೇವಸ್ಥಾನ ಬದಿ, ಜ್ಯೋತಿನಗರ, ಸ್ಟೋನ್‍ಹಿಲ್, ಸ್ಟೀವರ್ಟ್ ಹಿಲ್, ಗೌಳಿಬೀದಿ, ಹೊಸಬಡಾವಣೆ, ರೈಫಲ್‍ರೇಂಜ್, ಸುಬ್ರಮಣ್ಯನಗರ).

ಸಮುದಾಯ ಭವನಗಳಲ್ಲಿ ತೆರೆದಿರುವ ಗಂಜೀಕೇಂದ್ರದಲ್ಲಿ ತಾತ್ಕಾಲಿಕ ಆಸರೆ ಪಡೆಯಲು ಇಚ್ಛಿಸುವವರು ನಗರಸಭೆಯ ದೂರವಾಣಿ ಸಂಖ್ಯೆ 08272-220111, 08272-224960, 9448224994 ಮತ್ತು 9743132759 ನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರಾದ ಬಿ.ಶುಭ ಅವರು ತಿಳಿಸಿದ್ದಾರೆ.