ನಾಪೆÇೀಕ್ಲು, ಜೂ. 27: ನೆಂಟರ ಮನೆಗೆ ತೆರಳಿದ ತಾಯಿ, ಮಗ ನದಿಯೊಂದಕ್ಕೆ ಅಡ್ಡಲಾಗಿ ಹಾಕಲಾಗಿದ್ದ ಮರದ ಪಾಲ ದಾಟುತ್ತಿದ್ದ ಸಂದರ್ಭ ಆಯ ತಪ್ಪಿ ಹೊಳೆಗೆ ಬಿದ್ದ ಪರಿಣಾಮ ಮಗ ಸಾವನ್ನಪ್ಪಿ ತಾಯಿ ಜೀವಂತವಾಗಿ ಪಾರಾದ ಘಟನೆ ಕಕ್ಕಬೆ ಸಮೀಪದ ನಾಲಡಿ ಗ್ರಾಮದಲ್ಲಿ ಸಂಭವಿಸಿದೆ.ಚೇರಂಬಾಣೆ ಸಮೀಪದ ಕೋಪಟ್ಟಿ ಗ್ರಾಮದ ಎ.ಎ. ಕುಶಾಲಪ್ಪ (19) ಮೃತಪಟ್ಟ ದುರ್ದೈವಿಯಾದರೆ, ತಾಯಿ ಚೋಂದಮ್ಮ (40) ಜೀವಂತವಾಗಿ ಪಾರಾದವರಾಗಿದ್ದಾರೆ.

ಘಟನೆ ವಿವರ : ಕೋಪಟ್ಟಿ ಗ್ರಾಮದ ಅಪ್ಪಣ್ಣ ಅವರ ಪತ್ನಿ ಚೋಂದಮ್ಮ ಮತ್ತು ಮಗ ಕುಶಾಲಪ್ಪ (ಮೃತ) ನಿನ್ನೆ ಸಂಜೆ ನಾಲಡಿ ಗ್ರಾಮದ ಕೆ.ಕೆ. ರಘು ಅವರ ಮನೆಗೆ ನೆಂಟರಾಗಿ ಆಗಮಿಸಿದ್ದರು. ಅವರ ಮನೆಗೆ ತೆರಳುವ ಸಂದರ್ಭ ಬಿ.ಸಿ.ಮುತ್ತಣ್ಣನವರ ತೋಟದ ಸಮೀಪ ಅಂಬಲ ಪೆÇಳೆಗೆ ಅಡ್ಡಲಾಗಿ ಹಾಕಲಾದ ಮರದ ಪಾಲ ದಾಟುವ ಸಂದರ್ಭ ತಾಯಿ ಮತ್ತು ಮಗ ಆಯತಪ್ಪಿ ಹೊಳೆಗೆ ಬಿದ್ದಿದ್ದಾರೆ. ತಾಯಿ ಚೋಂದಮ್ಮ ಗಿಡಗಂಟಿಗಳನ್ನು ಹಿಡಿದು ಜೀವಾಪಾಯದಿಂದ ಪಾರಾದರೆ, ಮಗ ಕುಶಾಲಪ್ಪ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಈತನನ್ನು ಪೆÇಲೀಸರು, ಸ್ಥಳೀಯರು ಹುಡುಕಾಡಿದರೂ ಪತ್ತೆಯಾಗಿಲ್ಲ. ಇಂದು ಬೆಳಿಗ್ಗಿನಿಂದಲೇ ಹುಡುಕಾಟ ನಡೆಸಿದ ಸಂದರ್ಭ ಸುಮಾರು 40 ಅಡಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆಯಿಂದ ಮಳೆಗಾಲಕ್ಕೆ ಮೊದಲ ಪ್ರಾಣಬಲಿ ಸಂಭವಿಸಿದಂತಾಗಿದೆ.

-ಪಿ.ವಿ. ಪ್ರಭಾಕರ್, ಚಿತ್ರ : ಲಕ್ಷ್ಮೀಶ್