ಗೋಣಿಕೊಪ್ಪಲು, ಜೂ.26: ಮುಖ್ಯಮಂತ್ರಿ ವಿಶೇಷ ಪ್ಯಾಕೇಜ್‍ನಲ್ಲಿ ಗೋಣಿಕೊಪ್ಪಲು ಬೈಪಾಸ್ ರಸ್ತೆ ಅಭಿವೃದ್ಧಿ ಒಳಗೊಂಡಂತೆ ಇಲ್ಲಿನ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಇತ್ತೀಚೆಗೆ ಕೊಡಗು ಉಸ್ತುವಾರಿ ಸಚಿವ ಸೀತಾರಾಮ್ ಭೂಮಿಪೂಜೆ ನೆರವೇರಿಸಿದರು.

ಸುಮಾರು ರೂ.39 ಲಕ್ಷ ಅನುದಾನದಲ್ಲಿ ವಾರ್ಡ್ ನಂ. 4, ಪಟೇಲ್ ನಗರ ರಸ್ತೆ ಅಭಿವೃದ್ಧಿ, ಅಮ್ಮಕೊಡವ ಸಮಾಜದಿಂದ ಅಣ್ಣಯ್ಯನವರ ಮನೆವರೆಗೆ ರಸ್ತೆ ಅಭಿವೃದ್ಧಿ, ಸೆಂಟ್ ಥೋಮಸ್ ಶಾಲೆಯಿಂದ ಜೀವನ್ ಮಾಸ್ಟರ್ ಮನೆವರೆಗೆ ರಸ್ತೆ ಅಭಿವೃದ್ಧಿ, ಪೆÇಲೀಸ್ ಮುತ್ತಣ್ಣ ಮನೆಯಿಂದ ಮಹಮ್ಮದ್ ಆಲಿ ಮನೆವರೆಗೆ ರಸ್ತೆ ಅಭಿವೃದ್ಧಿ, ನೇತಾಜಿ ಬಡಾವಣೆಯ ವಿಜಯ ರಾಮಸ್ವಾಮಿ ಅವರ ಮನೆಯಿಂದ ಹಮೀದ್ ಪೆÇಲೀಸ್ ಮನೆವರೆಗೆ ರಸ್ತೆ ಅಭಿವೃದ್ಧಿ, 8ನೇ ವಿಭಾಗದ ಮಸೀದಿಯಿಂದ ಅರುವತ್ತೊಕ್ಕಲು ರಸ್ತೆ, 8ನೇ ವಿಭಾಗದ ಗೌತಮ್ ಮನೆ ಪಕ್ಕ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಒಳಗೊಂಡಂತೆ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಭೂಮಿಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆ ಮೂಲಕ ವಿಶೇಷ ಪ್ಯಾಕೇಜ್ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದ್ದು, ಮುಂದಿನ ವರ್ಷದಿಂದ ಮತ್ತಷ್ಟು ಅನುದಾನವನ್ನು ತರಲಾಗುವದು ಎಂದು ಇದೇ ಸಂದರ್ಭ ಸಚಿವರು ತಿಳಿಸಿದ್ದಾರೆ,

ಭೂಮಿಪೂಜೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿಪೆÇನ್ನಪ್ಪ, ಮಾಜಿ ಎಂಎಲ್‍ಸಿ ಅರುಣ್‍ಮಾಚಯ್ಯ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಡೇಮಾಡ ಕುಸುಮ ಜೋಯಪ್ಪ, ಹರೀಶ್ ಬೋಪಣ್ಣ, ಗೋಣಿಕೊಪ್ಪಲು ಗ್ರಾ.ಪಂ.ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬಿ.ಎನ್.ಪ್ರಕಾಶ್, ಜೆ.ಕೆ.ಸೋಮಣ್ಣ, ಪ್ರಭಾವತಿ, ಧನಲಕ್ಷ್ಮಿ, ಮಂಜುಳಾ, ಸಾಹಿನಾ, ಮುರುಘ, ಯಾಸ್ಮೀನ್, ಕಲೀಮುಲ್ಲಾ, ರಾಜಶೇಖರ್, ಕಾಡ್ಯಮಾಡ ಚೇತನ್, ಹರಿದಾಸ್ (ಮಣಿ) ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷೆ ಹಾಗೂ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು.

ಕೊಡಗು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು, ವೀರಾಜಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಕಿರಿಯ ಅಭಿಯಂತರ ನವೀನ್, ಉಪ ವಿಭಾಗಾಧಿಕಾರಿ ನಂಜುಂಡೇ ಗೌಡ,ತಾ.ಪಂ. ಇಓ ಕಿರಣ್ ಪೆಡ್ನೇಕರ್ ಮುಂತಾದವರು ಉಪಸ್ಥಿತರಿದ್ದರು.