ನಾಪೋಕ್ಲು, ಜೂ. 26: ವಿದ್ಯಾರ್ಥಿಗಳು ವಿದ್ಯಾರ್ಜನೆ ಜೊತೆಗೆ ನಾಯಕತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದ ರೊಂದಿಗೆ ಉನ್ನತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ಹಂತದಲ್ಲಿ ಶಿಸ್ತುಬದ್ಧ ಅಧ್ಯಯನದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮೈಸೂರು ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಸಿ.ಎಂ. ಪೂವಯ್ಯ ಹೇಳಿದರು. ಸ್ಥಳೀಯ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ 2017-18ರ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದು ಉತ್ತಮ ವಿಷಯದ ಕಡೆಗೆ ಗಮನ ಹರಿಸಬೇಕು. ದುಶ್ಚಟಗಳಿಗೆ ದಾಸ ರಾಗದಂತೆ ಹಿತನುಡಿಗಳನ್ನಾಡಿದರು. ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ ವಿಧೇಯರಾಗಿದ್ದು, ಬೆಳಗಿದ ಜ್ಯೋತಿಯಂತೆ ಉಜ್ವಲವಾಗಿ ಬದುಕು ರೂಪಿಸಬೇಕು ಎಂದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರೊ. ಬಿದ್ದಾಟಂಡ ಸಿ. ಪೊನ್ನಪ್ಪ, ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಅರೆಯಡ ಸೋಮಪ್ಪ, ಮಕ್ಕಿ ಎಸ್. ಸುಬ್ರಹ್ಮಣ್ಯ, ಕಂಗಾಂಡ ಕಾಳಯ್ಯ, ಬೊಪ್ಪಂಡ ಕುಶಾಲಪ್ಪ, ಬಿದ್ದಾಟಂಡ ಬೆಳ್ಯಪ್ಪ, ಕೊಂಬಂಡ ಗಣೇಶ್, ಬಿದ್ದಾಟಂಡ ಪಾಪು ಮುದ್ದಯ್ಯ, ಅಪ್ಪಾರಂಡ ಅಪ್ಪಯ್ಯ, ದೀಪು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಧರಿತ್ರಿ, ದೇವಿಕಾ, ಅಬಿದಾ ಪ್ರಾರ್ಥಿಸಿದರು. ಪ್ರಾಂಶುಪಾಲೆ ಬಿ.ಎಂ. ಶಾರದಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹ ಶಿಕ್ಷಕಿ ಎಂ.ಎಂ. ಕವಿತಾ ಅತಿಥಿಗಳನ್ನು ಪರಿಚಯಿಸಿದರು. ಸಹ ಶಿಕ್ಷಕಿ ಡಿಂಪಲ್ ಪ್ರತಿಜ್ಞಾ ವಿಧಿ ಬೋಧಿಸಿ ದರು. ಶಾಲಾ ನಾಯಕ ಕೆ.ಪಿ. ಸುಬ್ಬಯ್ಯ ಶಾಲಾ ವರದಿ ವಾಚಿಸಿ, ಶಿಕ್ಷಕಿ ಚಂದ್ರಕಲಾ ನಿರೂಪಿಸಿ, ಎಸ್.ಟಿ. ಲೀಲಾವತಿ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಶಾಲಾ ನಾಯಕನಾಗಿ ಕೆ.ಪಿ. ಸುಬ್ಬಯ್ಯ, ಕ್ರೀಡಾ ನಾಯಕನಾಗಿ ಎಸ್.ಎ. ಸುಬ್ಬಯ್ಯ, ಸಾಂಸ್ಕøತಿಕ ನಾಯಕಿಯಾಗಿ ಧರಿತ್ರಿ ಮಹೇಶ್, ಸ್ವಚ್ಛತಾ ನಾಯಕನಾಗಿ ಸಿ.ಎಸ್. ರೋಹನ್ ಉತ್ತಪ್ಪ, ಉಪ ಶಾಲಾ ನಾಯಕನಾಗಿ ಎಂ.ಸಿ. ಮುತ್ತಣ್ಣ, ಉಪ ಕ್ರೀಡಾ ನಾಯಕನಾಗಿ ಬಿ.ಟಿ. ಸೂರಜ್ ಅಯ್ಯಪ್ಪ, ಉಪ ಸಾಂಸ್ಕøತಿಕ ನಾಯಕಿಯಾಗಿ ಕೆ.ಆರ್. ಲೇಖನ, ಉಪ ಸ್ವಚ್ಛತಾ ನಾಯಕಿಯಾಗಿ ಎಂ.ಆರ್. ಪ್ರಾರ್ಥನ, ಶಾಲಾ ಕಾರ್ಯದರ್ಶಿಯಾಗಿ ಎ.ಡಿ. ಅನನ್ಯ, ಶಾಲಾ ಕ್ರೀಡಾ ಕಾರ್ಯದರ್ಶಿಯಾಗಿ ಎಂ.ಎ. ಮಾಚಯ್ಯ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಎಂ.ಕೆ. ಪ್ರತಿ ಪೊನ್ನಮ್ಮ ಹಾಗೂ ಸ್ವಚ್ಛತಾ ಕಾರ್ಯದರ್ಶಿಯಾಗಿ ಸಿಂಚನಾ ಕಾವೇರಮ್ಮ ಆಯ್ಕೆಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

- ದುಗ್ಗಳ