ಮಡಿಕೇರಿ, ಜೂ. 26: ಕೇರಳದ ಉದ್ಯಮಿಗಳಿಗೆ ಜಾಗ, ಕಟ್ಟಡ, ವಾಹನ ಒದಗಿಸುವದಾಗಿ ನಂಬಿಸಿ ಬರಮಾಡಿಕೊಂಡು ಒಂಟಿ ª ್ಲರಿಸಿ, ಹುಡುಗಿಯರನ್ನು ತೋರಿಸಿ ಪೊಲೀಸರ ವೇಷದಲ್ಲಿ ಧಾಳಿ ಮಾಡಿ ವಂಚಿಸುತ್ತಿದ್ದ ಪ್ರಕರಣದ ಹಿಂದೆಯೇ ಇದೀಗ ಹುಡುಗಿಯರನ್ನು ಒದಗಿಸುವ ಆಮಿಷವೊಡ್ಡಿ ನಗ-ನಾಣ್ಯ ದರೋಡೆ ಮಾಡಿರುವ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿüಸಿದ್ದಾರೆ.

ಮೂಲತಃ ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿಯ ಉದ್ಯಮಿ ಅಬೂಬಕ್ಕರ್ ಮುನಾವರ್ ಎಂಬವರಿಂದ ಹಣ ಲಪಟಾಯಿಸುವ ಸಲುವಾಗಿ ಕ್ಯಾಲಿಕಟ್‍ನ ಹ್ಯಾರಿಸ್ ಮತ್ತು ರಹೀಂ ಎಂಬವರುಗಳು ಒಳಸಂಚು ರೂಪಿಸಿದ್ದಾರೆ. ಇವರುಗಳ ಪರಿಚಯವಿರುವ ಅಬೂಬಕ್ಕರ್ ಸಂಚಿನ ಅರಿವಿಲ್ಲದೆ ಮೋಜಿನ ಆಸೆಗಾಗಿ ಇವರುಗಳು ಹೇಳಿದಂತೆ ಕೇಳಿದ್ದಾನೆ.

ಪಿರಿಯಾಪಟ್ಟಣ ಬಳಿಯ ಬೆಟ್ಟದಪುರದ ಜಮಾಲುದ್ದೀನ್, ಹಾಕತ್ತೂರು ಬಳಿಯ ಬಿಳಿಗೇರಿಯ ಬಿ.ಎಸ್. ಮೊಹಮ್ಮದ್ ಇಲ್ಯಾಸ್, ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿಯ ಜೆ. ಸೆÀಬಾಸ್ಟಿನ್, ಮಲಪ್ಪುರಂನ ಕೆ. ಫಜಲುಲ್ ರೆಹಮಾನ್ ಅವರುಗಳೊಂದಿಗೆ ಸೇರಿಕೊಂಡು ದರೋಡೆಗೆ ರೂಪುರೇಷೆ ಹೆಣೆದಿದ್ದಾರೆ. ಅದರಂತೆ ಕಳೆದ ತಾ. 23ರಂದು ಅಬೂಬಕ್ಕರ್ ಅವರನ್ನು ಪೊನ್ನಂಪೇಟೆಗೆ ಕರೆಸಿಕೊಂಡಿದ್ದಾರೆ. ಅಲ್ಲಿಂದ ಅವರನ್ನು ಕರೆದೊಯ್ದು ಪಿರಿಯಾಪಟ್ಟಣದ ಹೊರವಲಯದ ಹರವೆ ಮಲ್ಲರಾಜಪಟ್ಟಣದಲ್ಲಿರುವ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಇಬ್ಬರು ಹುಡುಗಿಯರನ್ನು ತೋರಿಸಿದ್ದಾರೆ.

ನಂತರ ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ವಂಚಕರ ತಂಡದ ಇಬ್ಬರು ಪೊಲೀಸ್ ವೇಷದಲ್ಲಿ ಧಾಳಿ ಮಾಡಿದ್ದಾರೆ. ಬಳಿಕ ಎಲ್ಲರೂ ಸೇರಿ ಅಬೂಬಕ್ಕರ್ ಬಳಿ ಇದ್ದ ಎಟಿಎಂ ಕಾರ್ಡ್, ಸಹಿ ಮಾಡಿಸಿಕೊಂಡ ಚೆಕ್‍ಗಳು, ಖಾಲಿ ಹಾಳೆಯ ಮೇಲೆ ಸಹಿಮಾಡಿಸಿ ಪಡೆದುಕೊಂಡಿದ್ದಾರೆ.

(ಮೊದಲ ಪುಟದಿಂದ) ನಂತರ ರೂ. 2 ಲಕ್ಷ ಹಣ ತಂದುಕೊಡು ವಂತೆ ಬೆದರಿಸಿ ಕಳುಹಿಸಿದ್ದಾರೆ.

ಅಲ್ಲಿಂದ ಪೊನ್ನಂಪೇಟೆಗೆ ಮರಳಿದ ಅಬೂಬಕ್ಕರ್ ನಡೆದಿರುವ ಘಟನೆಯ ವಿವರ ಸಹಿತ ತಾ. 24ರಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇತ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ ವಂಚಕರು ಪರಾರಿಯಾಗಲು ಯತ್ನಿಸಿದ್ದಾರೆ. ಹುಣಸೂರಿನ ಕಲ್ಲುಕುಣಿಕೆ ಗ್ರಾಮಕ್ಕಾಗಿ ತಪ್ಪಿಸಿ ಕೊಳ್ಳಲು ಕಾರಿನಲ್ಲಿ ಪಯಣಿಸುತ್ತಿದ್ದ ಜಮಾನುದ್ದೀನ್, ಮೊಹಮ್ಮದ್ ಇಲ್ಯಾಸ್, ಸೆಬಾಸ್ಟಿನ್, ಫಜಲುಲ್, ರಹೀಂ ಅವರುಗಳನ್ನು ಬೆನ್ನಟ್ಟಿದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ಆರೋಪಿ ಕ್ಯಾಲಿಕಟ್‍ನ ಹ್ಯಾರಿಸ್ ಹಾಗೂ ತಂಡದ ಪಾತ್ರಧಾರಿಗಳಾದ ಮಂಗಳೂರು ಮೂಲದ ಮಹಿಳೆ ರುಕ್ಸಾನ ಯುವತಿಯರಾದ ಆಯಿಶಾ ಹಾಗೂ ಸೋನಾ ಎಂಬವರುಗಳು ತಲೆಮರೆಸಿಕೊಂಡಿದ್ದು, ಇವರುಗಳ ಪತ್ತೆಗಾಗಿ ರೂಪುರೇಷೆ ಹೆಣೆಯಲಾಗಿದೆ.

ಇನ್ನೆರಡು ವಂಚನೆ : ಬಂಧಿತರನ್ನು ವಿಚಾರಣೆ ಗೊಳಪಡಿಸಿದ ಸಂದರ್ಭ ಇದೇ ವಂಚಕರ ತಂಡ ಪಿರಿಯಾಪಟ್ಟಣದ ಅದೇ ಮನೆಯಲ್ಲಿ ಇನ್ನೂ ಮೂವರಿಗೆ ಇದೇ ರೀತಿಯಾಗಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 7ನೇ ಹೊಸಕೋಟೆ ಗ್ರಾಮದ ಸಲೀಂ ಹಾಗೂ ಕರೀಂ ಎಂಬವರೊಂದಿಗೆ ಸೇರಿಕೊಂಡು ಕೇರಳದ ಇಬ್ರಾಹಿಂ ಮತ್ತು ಸಾದಿಕ್ ಉಸ್ತಾದ್ ಅವರುಗಳಿಂದ ರೂ. 5 ಲಕ್ಷ ಹಣ ದರೋಡೆ ಮಾಡಿದ್ದಾರೆ. ಅಲ್ಲದೆ ಮುಸ್ತಫಾ ಎಂಬವರಿಂದ ರೂ. 2.5 ಲಕ್ಷ ಹಣ ದರೋಡೆ ಮಾಡಿರುವದು ತಿಳಿದು ಬಂದಿದೆ. ಸಲೀಂ ಹಾಗೂ ಕರೀಂ ಎಂಬವರು ಗಳು ಈ ಹಿಂದಿನ ವಂಚನೆ ಪ್ರಕರಣದ ರೆಹಮಾನ್ ತಂಡದವರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅವರುಗಳ ಸೂತ್ರದಾರಿಕೆ ಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ ಎನ್ನಲಾಗುತ್ತಿದೆ. ಇವರಿಬ್ಬರೂ ಕೂಡ ತಲೆಮರೆಸಿ ಕೊಂಡಿದ್ದು, ಬಂಧನಕ್ಕೆ ಕ್ರಮ ಕೈಗೊಂಡಿರುವದಾಗಿ ತನಿಖಾ ತಂಡದ ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ರೂ. 96 ಸಾವಿರ ನಗದು, 9 ಮೊಬೈಲ್ ಫೋನ್‍ಗಳು, ಒಂದು ಮಾರುತಿ ಕಾರು (ಕೆಎ05 ಎನ್ 4561), ಎಟಿಎಂ ಕಾರ್ಡ್, ಚೆಕ್‍ಗಳು ಸಹಿ ಪಡೆದ ಖಾಲಿ ಹಳೆ, ಪೊಲೀಸ್ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಹಾಗೂ ವೀರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಪೊನ್ನಂಪೇಟೆ ಠಾಣಾಧಿಕಾರಿ ಎಸ್.ಎನ್. ಜಯರಾಮ್, ಗೋಣಿಕೊಪ್ಪ ಠಾಣಾಧಿಕಾರಿ ಹೆಚ್.ವೈ. ರಾಜು, ಸಿಬ್ಬಂದಿಗಳಾದ ಕೃಷ್ಣ, ಮನು, ಮಹಮ್ಮದ್ ಅಲಿ, ಕುಶ, ಮೋಹನ, ಹರೀಶ್, ಅಬ್ದುಲ್ ಮಜೀದ್, ಸುಗಂಧ, ಮಂಜುನಾಥ್, ನವೀನ್ ಪಾಲ್ಗೊಂಡಿದ್ದರು. ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ ತನಿಖಾ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ರೂ. 10 ಸಾವಿರ ಬಹುಮಾನ ಘೋಷಿಸಿದ್ದಾರೆ.

- ಕುಡೆಕಲ್ ಸಂತೋಷ್