ಸೋಮವಾರಪೇಟೆ, ಜೂ. 26: ಪಟ್ಟಣದ ಜಯವೀರಮಾತೆ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಮೈಸೂರಿಗೆ ವರ್ಗಾವಣೆಗೊಂಡ ರೆ.ಫಾ. ರಾಯಪ್ಪ ಹಾಗೂ ವಿನ್ಸೆಂಟ್ ಮೊಂತೆರೋ ಅವರನ್ನು ಚರ್ಚ್‍ನ ಪಾಲನಾ ಸಮಿತಿಯ ಸದಸ್ಯರುಗಳು, ಕ್ರೈಸ್ತ ಬಾಂಧವರು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು. ಕಳೆದ 6 ವರ್ಷಗಳಿಂದ ದೇವಾಲಯದ ಧರ್ಮಗುರುಗಳಾಗಿ ರಾಯಪ್ಪ ಅವರು ಸೇವೆ ಸಲ್ಲಿಸಿದ್ದರೆ, ಮೊಂತೆರೋ ಅವರು ಸಂತ ಜೋಸೆಫರ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದರು.

ಇದೀಗ ರಾಯಪ್ಪ ಅವರು ಮೈಸೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುವಾಗಿ ನೇಮಕಗೊಂಡಿದ್ದಾರೆ. ಮೊಂತೆರೋ ಅವರು ಮೈಸೂರು ಧರ್ಮಕ್ಷೇತ್ರದ ಚಾನ್ಸಲರ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ.

ಇದೇ ಸಂದರ್ಭ ಜಯವೀರ ಮಾತೆ ದೇವಾಲಯದ ಧರ್ಮಗುರುಗಳಾಗಿ ರೆ. ಫಾ. ಎಂ. ರಾಯಪ್ಪ, ಸಹಗುರುಗಳಾಗಿ ಟೆನ್ನಿ ಕುರಿಯನ್ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ದೇವಾಲಯ ಪಾಲನಾ ಸಮಿತಿ ಪದಾಧಿಕಾರಿಗಳಾದ ವಿ. ಎ. ಲಾರೆನ್ಸ್, ಅಂತೋಣಿ ಡಿಸೋಜ, ವಿನ್ಸಿ, ಎನ್. ಜೆ. ಪ್ರಿನ್ಸ್, ಪಿಲಿಪ್, ಜೆಮ್ಮಿ ಮತ್ತಿತರರು ಉಪಸ್ಥಿತರಿದ್ದರು.