ಕೂಡಿಗೆ, ಜೂ. 26: ಹುದುಗೂರು ಮೀಸಲು ಅರಣ್ಯ ಮತ್ತು ಸೋಮವಾರಪೇಟೆ ಮೀಸಲು ಅರಣ್ಯ ವ್ಯಾಪ್ತಿಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯದಂಚಿನಿಂದ ಬಂದ ಕಾಡಾನೆಗಳು ಕೂಡಿಗೆ ಸಮೀಪದ ಯಡವನಾಡು ಗ್ರಾಮದ ರೈತರುಗಳ ಸುಮಾರು 12 ಎಕರೆಗೂ ಅಧಿಕ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳನ್ನು ನಾಶಪಡಿಸಿವೆ.

ಸುಮಾರು 5 ಕಾಡಾನೆಗಳು ಈ ವ್ಯಾಪ್ತಿಯ ರೈತರುಗಳಾದ ಎನ್.ಕೆ. ಮನೋಜ್, ಟಿ.ಕೆ. ಮಿನುಕುಮಾರ್, ಟಿ.ಸಿ. ಮಂಜುನಾಥ್ ಇವರುಗಳು ಬೆಳೆದಿದ್ದ ಬಾಳೆ, ಕಾಫಿ, ಶುಂಠಿ, ಕೆಸ, ಸುವರ್ಣಗೆಡ್ಡೆ ಬೆಳೆಗಳನ್ನು ನಾಶ ಪಡಿಸಿವೆ.

ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಸತೀಶ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾದ ಪೂರ್ಣಿಮಾ ಗೋಪಾಲ್ ಸ್ಥಳಕ್ಕೆ ಆಗಮಿಸಿ ಕಾಡಾನೆಗಳ ಧಾಳಿಗೆ ತುತ್ತಾದ ಬೆಳೆಗಳನ್ನು ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆಯ ವತಿಯಿಂದ ನಾಶವಾದ ಬೆಳೆಗಳಿಗೆ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದರು.