ಮಡಿಕೇರಿ, ಜೂ. 26: ಭಾರತೀಯ ಸಂಬಾರ ಮಂಡಳಿಯು ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಂಬಾರ ಬೆಳೆಗಳ ಸಸಿಗಳನ್ನು ಮಂಡಳಿಯ ಬೆಳಗೊಳ, ನಾರ್ವೆ ಅಂಚೆ, ಕೊಪ್ಪ ತಾ., ಚಿಕ್ಕಮಗಳೂರು ಜಿಲ್ಲೆ (ಕೊಪ್ಪದಿಂದ 10 ಕಿ.ಮೀ.) ದೂ. 08265-236239, ಬೆಟ್ಟದ ಮನೆ, ಮೂಡಿಗೆರೆ ತಾ., ಚಿಕ್ಕಮಗಳೂರು ಜಿಲ್ಲೆ(ಮೂಡಿಗೆರೆಯಿಂದ 13 ಕಿ.ಮೀ.) ದೂ. 08263-240902, ಯಸಳೂರು, ಸಕಲೇಶಪುರ ತಾ., ಹಾಸನ ಜಿಲ್ಲೆ (ಸಕಲೇಶಪುರದಿಂದ 30 ಕಿ.ಮೀ.) ದೂ. 08173-278166, ಐಗೂರು, ಸೋಮವಾರಪೇಟೆ ತಾ., ಕೊಡಗು ಜಿಲ್ಲೆ, (ಸೋಮವಾರಪೇಟೆ ಯಿಂದ 12 ಕಿ.ಮೀ.) ದೂ. 08276-287852 ಹಾಗೂ ಬಿಳಿಗೇರಿ, ಮಡಿಕೇರಿ ತಾ., ಕೊಡಗು ಜಿಲ್ಲೆ (ಮಡಿಕೇರಿಯಿಂದ 12 ಕಿ.ಮೀ.) ದೂ. 08272-227363 ಈ ಸಸ್ಯಪಾಲನ ಕೇಂದ್ರಗಳಿಂದ ಏಲಕ್ಕಿ ಸಸಿ (10 ತಿಂಗಳಿಂದ ಮೇಲ್ಪಟ್ಟು) ರೂ. 8, ಕಾಳುಮೆಣಸು (ಬೇರು ಬರಿಸಿದ ಪ್ರತಿ ಬಳ್ಳಿಗೆ) ರೂ.7.50, ಕಾಳುಮೆಣಸು ನ್ಯೂಕ್ಲಿಯಸ್ ಸಸಿಗಳು (ಒಂದು ಬಳ್ಳಿಗೆ) ರೂ. 12, ಬುಷ್ ಪೆಪ್ಪರ್ ರೂ. 25, ಪೆಪ್ಪರ್ ಟರ್ಮಿನಲ್ ಶೂಟ್ಸ್ ರೂ. 15 ಹಾಗೂ ವೆನಿಲ್ಲಾ ಬಳ್ಳಿಗಳು (ಒಂದು ಬಳ್ಳಿಗೆ) ರೂ. 25 ರಂತೆ ದರಗಳಲ್ಲಿ ಬೆಳೆಗಾರರಿಗೆ, ಸಂಸ್ಥೆ, ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಲಾಗುವದು.

ಆಸಕ್ತ ಬೆಳೆಗಾರರು ನಿಗದಿತ ಅರ್ಜಿ ಮತ್ತು ಹೆಚ್ಚಿನ ವಿವರಗಳಿಗೆ ಸಮೀಪದ ಭಾರತೀಯ ಸಂಬಾರ ಮಂಡಳಿಯ ಕಚೇರಿಗಳನ್ನು ಸಂಪರ್ಕಿಸಬಹುದು. ಮುಂಗಡ ಹಣದೊಂದಿಗೆ ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದೆ.