*ಗೋಣಿಕೊಪ್ಪಲು, ಜೂ. 26: ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳುವ ಮೂಲಕ ಮಾರಕ ಕಾಯಿಲೆ ಡೆಂಗ್ಯೂ ಜ್ವರದಿಂದ ದೂರವಿರಬೇಕು ಎಂದು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ಪ್ರದೀಪ್ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಡೆಂಗ್ಯೂ ಜ್ವರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂಡೇರ ಕುಸುಮಾ ಶೇಖರ್, ಸದಸ್ಯೆ ಬಿ.ಆರ್. ಸುಶೀಲಾ, ಪಿಡಿಓ ಶ್ರೀನಿವಾಸ್, ಪ್ರಬಾರ ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಅಧ್ಯಾಪಕ ರಾದ ಎಂ.ಪಿ. ರಾಘವೇಂದ್ರ, ಎನ್.ಕೆ. ಪ್ರಭು, ಸುಬ್ಬಯ್ಯ, ಪ್ರತಿಭಾ ಉತ್ತಪ್ಪ, ಬೆಂಡಿಕ್ಟ ಫರ್ನಾಂಡೀಸ್, ಕೆ. ಚಂದ್ರಶೇಖರ್ ಹಾಜರಿದ್ದರು.