ಗೋಣಿಕೊಪ್ಪಲು, ಜೂ. 28: ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಭೆ ತಾಲೂಕು ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಗ್ಗೆ ಮುಖಂಡ ಚೇಂದ್ರಿಮಾಡ ನಂಜಪ್ಪ ಮಾತನಾಡಿ, ಜೀವಿಜಯ ಮತ್ತು ಯಂ. ಸಿ. ನಾಣಯ್ಯ ಅವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಪಕ್ಷ ಸಂಘಟನೆ ಮಾಡಬೇಕಾಗಿದ್ದು, ಈ ಬಗ್ಗೆ ಪಕ್ಷದ ಹಿರಿಯ ಮುಖಂಡರು ರಾಜ್ಯ ನಾಯಕರಿಗೆ ಮನವರಿಕೆ ಮಾಡಬೇಕು. ವೀರಾಜಪೇಟೆ ತಾಲೂಕಿನಲ್ಲಿ ಇವರ ಸಾವಿರಾರು ಬೆಂಬಲಿಗರು ಪಕ್ಷದಲ್ಲಿದ್ದಾರೆಂದರು. ಪಕ್ಷದ ವಕ್ತಾರ ಎಂ. ಟಿ. ಕಾರ್ಯಪ್ಪ ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ಜನರು ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯವರನ್ನು ಈ ಬಾರಿ ಸೋಲಿಸಬೇಕಿದೆ. ಕಸ್ತೂರಿ ರಂಗನ್ ವರದಿ ತರಲು ಈ ಎರಡು ಪಕ್ಷಗಳು ಕಾರಣ, ರೈತರ ಪಕ್ಷವಾದ ಜೆಡಿಎಸ್ ಈ ಬಾರಿ ಜಯಗಳಿಸಿ ಕುಮಾರಸ್ವಾಮಿ ಮುಂದಿನ

(ಮೊದಲ ಪುಟದಿಂದ) ಮುಖ್ಯಮಂತ್ರಿಯಾಗುವದು ಖಚಿತ ಎಂದರು. ಯಂ.ಸಿ. ನಾಣಯ್ಯ ಅವರು ವಿದೇಶಕ್ಕೆ ತೆರಳಿದ್ದು, ಅವರು ಹಿಂತಿರುಗಿ ಬಂದ ನಂತರ ಅವರೊಂದಿಗೆ ಸಂಘಟನೆ ಬಗ್ಗೆ ಚರ್ಚಿಸಲಾಗುವದು ಎಂದರು. ಈ ಭಾಗದಲ್ಲಿ ಪಕ್ಷ ಸಂಘಟನೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಮಾಡಬೇಕು, ಮನೆ ಮನೆಗೆ ತೆರಳಿ ಮುಖಂಡರನ್ನು ಪಕ್ಷಕ್ಕೆ ಕರೆ ತರಬೇಕು ಎಂದು ಮಚ್ಚಾಮಾಡ ಮಾಚಯ್ಯ ಹೇಳಿದರು. ಕೆ.ಆರ್. ಸುರೇಶ್ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಬೆಳೆಸಲು ಹಿರಿಯ ನಾಯಕರು ತಮ್ಮ ಸಣ್ಣ ಪುಟ್ಟ ಪ್ರತಿಷ್ಠೆಯನ್ನು ಬಿಡಬೇಕು. ಈ ಬಾರಿ ಜೆಡಿಎಸ್ ಪಕ್ಷದಿಂದ ವೀರಾಜಪೇಟೆ ತಾಲೂಕಿನಿಂದ ವಿಧಾನಸಭೆಗೆ ಅಭ್ಯರ್ಥಿ ಸ್ಪರ್ಧಿಸಲಿದ್ದು, ಈ ಬಗ್ಗೆ ಮುಂದಿನ ವಾರದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವದು ಎಂದರು. ಜಿಲ್ಲಾ ಕಾರ್ಯಾಧ್ಯಕ್ಷ ಕಾರ್ಮಾಡು ಸುಬ್ಬಣ್ಣ ಮಾತನಾಡಿ, ಈ ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಎಲ್ಲರ ಒಮ್ಮತದ ತೀರ್ಮಾನದಂತೆ ಕೆಲಸ ಮಾಡಬೇಕಿದ್ದು, ಕೊಡಗಿನ ಎರಡು ಕ್ಷೇತ್ರದಲ್ಲಿ ಜೆಡಿಎಸ್ ಜಯ ಕಾಣಲಿದೆ ಎಂದರು.

ಕೋಳೇರ ದಯಾ ಚಂಗಪ್ಪ ಮಾತನಾಡಿ, ಈಗಾಗಲೇ ಯಂ.ಸಿ. ನಾಣಯ್ಯ ಮತ್ತು ಜೀವಿಜಯ ಅವರನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸವಾಗಿದೆ. ವೀರಾಜಪೇಟೆ ತಾಲೂಕಿನ ಕುಟ್ಟ, ಕಾನೂರು, ಬಾಳೆಲೆ, ನಾಲ್ಕೇರಿ, ಪೆÇನ್ನಂಪೇಟೆ, ಗೋಣಿಕೊಪ್ಪ, ಬಿಟ್ಟಂಗಾಲ, ವೀರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ನಾಪೋಕ್ಲು ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವದನ್ನು ಕೊಡಗಿನ ಜನ ಬಯಸಿದ್ದಾರೆಂದರು. ಪಕ್ಷದ ಮುಖಂಡ ಚೆಕ್ಕೇರ ಜೋಯಪ್ಪ, ನಾಸೀರ್, ತೀತೀರ ಮಂದಣ್ಣ, ವಿ.ಜಿ. ಮಂಜುನಾಥ್, ಗೋಪಾಲ್ ಮುಂತಾದವರು ಪಕ್ಷ ಸಂಘಟನೆ ಬಗ್ಗೆ ಸಲಹೆ ನೀಡಿದರು.

ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಅಧÀ್ಯಕ್ಷರಾಗಿದ್ದ ಮನ್ಸೂರ್ ಆಲಿ ಅವರನ್ನು ಏಕಾಏಕಿಯಾಗಿ ಬದಲಾವಣೆ ಮಾಡಿರುವದನ್ನು ಸಭೆಯಲ್ಲಿ ಖಂಡಿಸಲಾಯಿತು. ಈ ಬಗ್ಗೆ ಕುಮಾರಸ್ವಾಮಿಯವರಿಗೆ ತಿಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಉಸ್ತುವಾರಿ ವಿ.ಎಂ. ವಿಜಯ ಮತ್ತು ರಾಜ್ಯ ಸಮಿತಿ ಸದಸ್ಯ ಭರತ್ ಕುಮಾರ್ ಉಪಸ್ಥಿತರಿದ್ದರು.

ನೇಮಕ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಉಪಾಧÀ್ಯಕ್ಷರಾಗಿ ತೀತೀರ ಮಂದಣ್ಣ, ಕಾರ್ಯಾಧÀ್ಯಕ್ಷರಾಗಿ ಕೆ.ಆರ್. ಸುರೇಶ್, ಜಂಟಿ ಕಾರ್ಯದರ್ಶಿಯಾಗಿ ಅಫ್ಸಲ್ ಬೇಗ್, ಅಲ್ಪಸಂಖ್ಯಾತರ ಘಟಕದ ಅಧಕ್ಷರಾಗಿ ಸಿ.ಎ. ನಸೀರ್, ರೈತ ಮೋರ್ಚಾದ ಅಧÀ್ಯಕ್ಷರಾಗಿ ಜಿ.ಯು. ಮೊಣ್ಣಪ್ಪ, ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲ ವಿ. ಜಿ. ಮಂಜುನಾಥ್, ಕಾರ್ಯದರ್ಶಿಯಾಗಿ ವಕೀಲ ವಿ.ಎಸ್. ಸುರೇಶ್ ಮತ್ತು ಸಲಹಾ ಸಮಿತಿಗೆ ದಯಾ ಚಂಗಪ್ಪ, ಚೇಂದ್ರಿಮಾಡ ನಂಜಪ್ಪ, ಎಂ.ಸಿ. ದೇವಯ್ಯ, ಚಂದ್ರಶೇಖರ್, ಮತಿನ್, ಚಿರಿಯಪಂಡ ವೇಣು, ಮನ್ಸೂರ್ ಆಲಿ, ಪಿ.ಎಂ. ರಶೀದ್, ಕಾಳಮಾಡ ಬೋಸು, ಬಾಳೆಲೆ ಹೋಬಳಿ ಅಧ್ಯಕ್ಷರಾಗಿ ಎ.ಐ. ಸುಬ್ಬಯ್ಯ, ಕಾನೂರು ಹೋಬಳಿ ಅಧ್ಯಕ್ಷರಾಗಿ ಬೋಸು, ಬಾಳೆಲೆ ಹೋಬಳಿ ಅಧ್ಯಕ್ಷರಾಗಿ ವಿ.ಎ. ಪ್ರಶಾಂತ್, ತಿತಿಮತಿ ಹೋಬಳಿ ಅಧ್ಯಕ್ಷರಾಗಿ ಅರುಣ ಅವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಸಭೆಯಲ್ಲಿ ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವದೆಂದು ಎಂ. ಸಿ. ಬೆಳ್ಯಪ್ಪ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿ ವಿ.ಪಿ. ಲೋಹಿತ್ ಮಾಡಿದರು.