*ಗೋಣಿಕೊಪ್ಪಲು, ಜೂ. 28: ಬಾಳೆಲೆ ವಿಜಯಲಕ್ಷ್ಮೀ ಪದವಿಪೂರ್ವ ಕಾಲೇಜಿನಲ್ಲಿ ಯುವ ಸೌರಭ ಸಾಂಸ್ಕøತಿಕ ಕಾರ್ಯಕ್ರಮ ನೆರೆದಿದ್ದ ಪೇಕ್ಷಕರ ಮನಸೂರೆಗೊಂಡಿತು.

ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಹರಿಕಥೆ, ಡೊಳ್ಳುಕುಣಿತ, ನೃತ್ಯ, ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ಸ್ಯಾಕ್ಸೋಫೋನ್ ಸಂಗೀತ, ಕಂಸಾಳೆ ಮೊದಲಾದ ಕಾರ್ಯಕ್ರಮಗಳು ಮನಮೋಹಕವಾಗಿದ್ದವು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವ ಕಲಾವಿದರು ತಮ್ಮ ಅದ್ಬುತ ಪ್ರತಿಭೆ ಮೂಲಕ ಪ್ರೇಕ್ಷರನ್ನು ರಂಜಿಸಿದರು. ಡೊಳ್ಳು ಕುಣಿತ, ಕಂಸಾಳೆ ಕಲಾವಿದರು ಸಭಿಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಸುಮಾರು 4 ಗಂಟೆಗಳ ಕಾಲ ನಿರಂತರವಾಗಿ ನಡೆದ ಸಾಂಸ್ಕøತಿಕ ಸೌರಭ ಅಪಾರ ಮೆಚ್ಚುಗೆ ಗಳಿಸಿತು.

ಕಾರ್ಯಕ್ರಮ ಉದ್ಘಾಟಿಸಿದ ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕøತಿ ಶ್ರೀಮಂತವಾದುದು. ನಾಡು ನುಡಿಯ ಬೆಳವಣಿಗೆಗೆ ಸಂಸ್ಕøತಿ ಇಲಾಖೆ ಶ್ರಮವಹಿಸಿ ಕೆಲಸಮಾಡುತ್ತಿದೆ. ಪ್ರತಿಭಾವಂತ ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಯುವ ಸೌರಭದಂತಹ ಕಾರ್ಯಕ್ರಮಗಳು ನೆರವಾಗಲಿವೆ ಎಂದು ಹೇಳಿದರು.

ನಿರ್ದೇಶಕ ಮಾಚಂಗಡ ಸುಜಾ ಪೂಣಚ್ಚ ಮಾತನಾಡಿ, ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವಾಗಲಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಕಾಡ್ಯಮಾಡ ಉದಯ ಉತ್ತಪ್ಪ ಮಾತನಾಡಿ, ನಾಡಿನಲ್ಲಿ ವಿಭಿನ್ನ ಸಂಸ್ಕøತಿಗಳಿವೆ. ಇವುಗಳ ನಡುವೆ ಸಾಮರಸ್ಯ ಮೂಡಿಸುವದು ಮುಖ್ಯ ಎಂದು ಹೇಳಿದರು.

ಸಹ ಕಾರ್ಯದರ್ಶಿ ಪೋಡಮಾಡ ಮೋಹನ್, ಸಹ ಕೋಶಾಧಿಕಾರಿ ಆಲೆಮಾಡ ಕರುಂಬಯ್ಯ, ನಿರ್ದೇಶಕ ಪೆಮ್ಮಯ್ಯ, ಹಿರಿಯ ಶಿಕ್ಷಕ ಕೆ. ಚಂದ್ರಶೇಖರ್ ಹಾಜರಿದ್ದರು. ಪ್ರಬಾರ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಸ್ವಾಗತಿಸಿದರು. ಎಂ.ಪಿ. ರಾಘವೇಂದ್ರ ನಿರೂಪಿಸಿದರು. ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ವಂದಿಸಿದರು. - ಎನ್.ಎನ್. ದಿನೇಶ್