ಸೋಮವಾರಪೇಟೆ, ಜೂ. 28: ಇಲ್ಲಿನ ರೋಟರಿ ಹಿಲ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ರಾಕೇಶ್ ಪಟೇಲ್ ಅಧಿಕಾರ ಸ್ವೀಕರಿಸಿದರು.ಸ್ಥಳೀಯ ಮಾನಸ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಯೋಜಿತ ರಾಜ್ಯಪಾಲ ಜೋಸೆಫ್ ಮ್ಯಾಥ್ಯೂ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯದರ್ಶಿಯಾಗಿ ಎಂ.ಎಂ.ಪ್ರಕಾಶ್ ಕುಮಾರ್, ಉಪಾಧ್ಯಕ್ಷರಾಗಿ ಜಿ.ಜೆ.ಗಿರೀಶ್, ಜಂಟಿ ಕಾರ್ಯದರ್ಶಿಯಾಗಿ ಎಚ್.ವಿ.ಪ್ರದೀಪ್ ಕುಮಾರ್, ಖಜಾಂಚಿಯಾಗಿ ಎಂ.ಡಿ.ಲಿಖಿತ್, ಯೋಜನಾ ನಿರ್ದೇಶಕರುಗಳಾಗಿ ಡಿ.ಪಿ.ಪ್ರೀತಂ, ಕೆ.ಡಿ.ಬಿದ್ದಪ್ಪ, ಡಿ.ಪಿ.ರಮೇಶ್, ಬಿ.ಎಲ್.ಶಶಿಧರ್, ಎಚ್.ಸಿ.ನಾಗೇಶ್, ಎ.ಡಿ.ಶುಭಕರ್, ಬಿ.ಎಂ.ದಿನೇಶ್, ಶಿವಕುಮಾರ್, ಓ.ವಿ.ಕೃಷ್ಣಾನಂದ, ನಂದಿನಿ ಗೋಪಾಲ್, ಎಸ್.ಡಿ. ವಿಜೇತ್, ಸಿ.ಬಿ.ದಿನೇಶ್, ಬಿ.ಟಿ.ಸತೀಶ್, ಎ.ಪಿ.ವೀರರಾಜು ಪ್ರಮಾಣವಚನ ಸ್ವೀಕರಿಸಿದರು. ರೋಟರಿ ನೂತನ ಸದಸ್ಯರುಗಳಾಗಿ ಸುಮಲತ ಪುರುಷೋತ್ತಮ್, ವೀಣಾ ಮನೋಹರ್, ಚೇತನ್ ಸೇರ್ಪಡೆಗೊಂಡರು. ನೂತನ ಅಧ್ಯಕ್ಷ ರಾಕೇಶ್ ಮಾತನಾಡಿ, ಸಮಾಜ ಸೇವೆಗೆ ರೋಟರಿ ಸಂಸ್ಥೆ ವೇದಿಕೆಯಾಗಿದ್ದು, ರೋಟರಿ ಹಿರಿಯ ಸದಸ್ಯರ ಸಹಕಾರದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.

ಸಮಾರಂಭದ ವೇದಿಕೆಯಲ್ಲಿ ಸಹಾಯಕ ರಾಜ್ಯಪಾಲ ಮಹೇಶ್ ಕುಮಾರ್, ವಲಯ ಸೇನಾನಿ ಮೋಹನ್ ರಾಮ್, ಮಾಜಿ ಅಧ್ಯಕ್ಷ ಭರತ್ ಭೀಮಯ್ಯ, ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಇದ್ದರು.