ನಾಪೋಕ್ಲು, ಜೂ. 29: ಭಾರೀ ಮಳೆ ಗಾಳಿಗೆ ವಾಸವಿದ್ದ ಮನೆಯ ಮೇಲೆ ಮರಬಿದ್ದು, ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಮರಂದೋಡ ಗ್ರಾಮದಲ್ಲಿ ಸಂಭವಿಸಿದೆ.

ಕಕ್ಕಬೆ ಕುಂಜಿಲ ಗ್ರಾಮ ಪಂಚಾಯ್ತಿಯ ಮರಂದೊಡ ಗ್ರಾಮದ ನಿಡುಪಂಡ ದಿ. ಪಳಂಗಪ್ಪ ಅವರ ಪತ್ನಿ ನಿಡುಪಂಡ ಮುದ್ದವ್ವ ವಾಸವಾಗಿರುವ ಮನೆಯ ಮೇಲೆ ಇತ್ತೀಚೆಗೆ ರಾತ್ರಿ ಮನೆಯ ಸಮೀಪವಿರುವ ಭಾರೀ ಗಾತ್ರದ ಮರವೊಂದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಇದರಿಂದ ಸುಮಾರು 70 ಸಾವಿರ ನಷ್ಟ ಸಂಭವಿಸಿದ್ದು, ಇದೀಗ ಮುದ್ದವ್ವ ಅವರಿಗೆ ಮನೆ ಇಲ್ಲದಂತಾಗಿದೆ.ಸ್ಥಳಕ್ಕೆ ಕುಂಜಿಲ ಗ್ರಾ.ಪಂ. ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಕಂದಾಯ ಪರಿವೀಕ್ಷಕ ರಾಮಯ್ಯ ತೆರಳಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವದಾಗಿ ಭರವಸೆಯಿತ್ತಿದ್ದಾರೆ. -ದುಗ್ಗಳ