ಕೂಡಿಗೆ, ಜೂ. 29: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಗಳಲ್ಲಿ ಒಂದಾಗಿರುವ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಒಳಾವರಣದಲ್ಲಿ ನಿರ್ಮಾಣಗೊಂಡಿ ರುವ ಬೃಂದಾವನ ವೀಕ್ಷಣೆಗೆ ಒಂದು ವರ್ಷದ ಹಿಂದೆ ಅವಕಾಶ ಕಲ್ಪಿಸಲಾಗಿದ್ದರೂ, ಬೃಂದಾವನದ ಕಾರಂಜಿ ವೀಕ್ಷಣೆಯ ಭಾಗ್ಯ ಇನ್ನೂ ಕನಸಾಗಿಯೇ ಉಳಿದಿದೆ. 5 ಕೋಟಿ.ರೂ ವೆಚ್ಚದಲ್ಲಿ ಉದ್ಯಾನವನದ ಕಾಮಗಾರಿಯ ಕೆಲಸ ಶೇ.98 ಭಾಗ ಮುಗಿದು ಹೆಸರಿಗೆ ಮಾತ್ರ ಉದ್ಘಾಟನೆಗೊಂಡಿದ್ದರೂ ಬೃಂದಾವನ ವೀಕ್ಷಣೆ ಮಾಡಿದ ಪ್ರವಾಸಿಗೆ ಕೋಟಿ ಹಣ ಖರ್ಚು ಮಾಡಿರುವ ಕಾರಂಜಿಯ ಮನರಂಜನೆಯನ್ನು ಪಡೆಯಲು ಸಾಧ್ಯವಿಲ್ಲದಂತಾಗಿದೆ.

ವಿದ್ಯುತ್ ಟ್ರಾನ್ಸ್‍ಫಾರ್ಮರ್ ಮತ್ತು ಜನರೇಟರ್ ಅಳವಡಿಕೆಯ ನೆಪದಿಂದ ಕಾಮಗಾರಿಯು ಸ್ಥಗಿತ ಗೊಂಡಿರು ವದರಿಂದ ಜಲಾಶಯದ ಜೊತೆಗೆ ಬೃಂದಾವನದ ಸೊಬಗನ್ನು ಸವಿಯುವ ಪ್ರವಾಸಿಗರಿಗೆ ಕಾರಂಜಿಯ ವೀಕ್ಷಣೆಯ ಭಾಗ್ಯ ಇನ್ನೂ ದೊರೆತಿಲ್ಲ.

ಈಗಾಗಲೇ ಬೃಂದಾವನ ವೀಕ್ಷಣೆಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಇದೀಗ ಕಾರಂಜಿ ವ್ಯವಸ್ಥೆಗೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದು ಬಾಕಿಯಿರುವ ವಿದ್ಯುಚ್ಛಕ್ತಿ ಅಳವಡಿಕೆಯ ಕೆಲಸ ಗಳನ್ನು ಒಂದೆರಡು ತಿಂಗಳಗಳಲ್ಲಿ ಮುಗಿಸಿ ಪ್ರವಾಸಿಗರಿಗೆ ಅತ್ಯಾಧುನಿಕ ವ್ಯವಸ್ಥೆಯ ಕಾರಂಜಿಯ ಮನರಂಜನೆ ಯನ್ನು ಒದಗಿಸಲಾಗುವದು ಕಾರ್ಯಪಾಲಕ ಅಭಿಯಂತರರಾದ ರಂಗಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.