ಶ್ರೀಮಂಗಲ, ಜೂ. 29: ಜಿಲ್ಲೆಯಲ್ಲಿ ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಅಲ್ಲಲ್ಲಿ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡು ಬರುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆದರೆ ಪೊನ್ನಂಪೇಟೆ ಗ್ರಾ.ಪಂ ಮಾತ್ರ ಇದ್ಯಾವದರ ಪರಿವೇ ಇಲ್ಲದೆ ಹಾಗೂ ಶುಚಿತ್ವದ ಕಡೆಗೆ ಗಮನ ಕೊಡದೆ ಅವೈಜ್ಞಾನಿಕ ರೀತಿಯ ಮಳೆಕೊಯ್ಲು ಘಟಕವನ್ನು ಸ್ಥಾಪಿಸಿ ನಗರದ ಸಾರ್ವಜನಿಕರಿಗೆ ಕೊಳಚೆ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಪೊನ್ನಂಪೇಟೆ ಗ್ರಾಮಸ್ಥರು ಗ್ರಾ.ಪಂ. ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊನ್ನಂಪೇಟೆಯ ನಾಗರಿಕರಿಗೆ ಶುದ್ದ ಕುಡಿಯುವ ನೀರಿನ ಯೋಜನೆಗಾಗಿ ಕುಂದ ರಸ್ತೆಯ ನಿನಾದ ವಿದ್ಯಾಸಂಸ್ಥೆಯ ಮುಂಭಾಗ ದಲ್ಲಿ ಕೊಳವೆ ಬಾವಿಯೊಂದನ್ನು ಈ ಹಿಂದೆ ತೆಗೆಯಲಾಗಿದೆ. ಕೊಳವೆ ಬಾವಿಯಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಇದರ ಸಮೀಪ ಇಂಗು ಗುಂಡಿಯನ್ನು ತೆಗೆಯಲಾಗಿದೆ. ಸುಮಾರು 1.25 ಲಕ್ಷ ವೆಚ್ಚದಲ್ಲಿ ಯಾವದೇ ಮುಂದಾಲೋಚನೆ ಇಲ್ಲದೆ ಅವೈಜ್ಞಾನಿಕವಾಗಿ ಈ ಇಂಗು ಗುಂಡಿ ಯನ್ನು ನಿರ್ಮಾಣ ಮಾಡಲಾಗಿದೆ.

ಈ ಇಂಗು ಗುಂಡಿಗೆ ರಸ್ತೆಯ ಬದಿಯ ಚರಂಡಿಯ ನೀರನ್ನು ನೇರವಾಗಿ ಹರಿಬಿಟ್ಟಿದ್ದು, ಪೊನ್ನಂಪೇಟೆ ಮುಖ್ಯರಸ್ತೆಯಿಂದಲೇ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಇಂಗು ಗುಂಡಿಗೆ ಚರಂಡಿಯ ನೀರನ್ನು ಹರಿಬಿಡಲಾಗಿದೆ. ಇದರೊಂದಿಗೆ ಸ್ಯಾನಿಟರಿ ಪ್ಯಾಡ್‍ಗಳು, ಫಿನಾಯಿಲ್, ಕಳೆನಾಶಕ, ಸೊಳ್ಳೆ ಮತ್ತು ಕ್ರಿಮಿ ಕೀಟಗಳನ್ನು ನಾಶಪಡಿಸಲು ಬಳಸಿದ ರಾಸಾಯನಿಕ ಸಿಂಪಡಣೆ, ತಿರುಗಿಸಿದಾಗ ಕಶ್ಮಲ ಮಿಶ್ರಿತ ನೀರು ಬರುತ್ತಿರುವುದು ಕಂಡು ಬರುತ್ತಿದೆ.

ಮಳೆ ಕುಯ್ಲು ಮಾಡಲು ಸಾಕಷ್ಟು ವಿಧಾನಗಳು ಮತ್ತು ನಿಯಮಗಳಿದ್ದು, ಛಾವಣಿಗೆ ಬಿದ್ದ ನೀರನ್ನು ನೇರವಾಗಿ ಇಂಗು ಗುಂಡಿಗೆ ಹರಿಸಬೇಕೆಂಬ ನಿಯಮವಿದೆ. ಭೂಮಿಗೆ ಬಿದ್ದ ಅಥವಾ ಹೊಲಗದ್ದೆಗಳಿಂದ ಹರಿದು ಬಂದ ಚರಂಡಿ ನೀರನ್ನು ಇಂಗು ಗುಂಡಿಗೆ ಸೇರಿಸಲೇಬಾರದು. ಒಂದು ವೇಳೆ ಈ ರೀತಿಯಲ್ಲಿ ನೀರನ್ನು ಬಳಸುವಂತಹ ಪರಿಸ್ಥಿತಿ ಪೊನ್ನಂಪೇಟೆ ನಾಗರಿಕರದ್ದಾಗಿದ್ದು, ಈ ಬಗ್ಗೆ ಗ್ರಾ.ಪಂ ಕಾರ್ಯದರ್ಶಿ ಯವರಿಂದ ಮಾಹಿತಿ ಬಯಸಿದಾಗ ಈ ಬಗ್ಗೆ ಈಗಾಗಲೆ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಈ ಅವೈಜ್ಞಾನಿಕ ಇಂಗು ಗುಂಡಿ ಬಗ್ಗೆ ಕಳೆದ ಕೆಲವು ತಿಂಗಳ ಹಿಂದೆಯೇ ಮಾಧ್ಯಮಗಳು ವರದಿ ಮಾಡಿ ಗಮನ ಸೆಳೆಯಲಾಗಿದ್ದು, ಇಲ್ಲಿಯವರೆಗೆ ಈ ಬಗ್ಗೆ ಯಾವದೇ ಕ್ರಮ ಕೈಗೊಂಡಿಲ್ಲ. ಗ್ರಾ.ಪಂ.ನ ಕಾರ್ಯವೈಖರಿಯ ಬಗ್ಗೆ ಈಗಾಗಲೆ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಮೂಕಳೆರ ಸುಮಿತಾ ಗಣೇಶ್ ಪ್ರತಿಕ್ರಿಯಿಸಿ, ಈಗಾಗಲೆ ಮಾಹಿತಿ ಲಭ್ಯವಾಗಿದ್ದು, ಸ್ಥಳ ಪರಿಶೀಲನೆ ಮಾಡಲಾಗಿದೆ. ಪ್ರಾಣಿ ಪಕ್ಷಿಗಳ ಮಲ ಸೇರಿದಂತೆ ವಿವಿಧ ತ್ಯಾಜ್ಯ ವಸ್ತುಗಳು ನೇರವಾಗಿ ಇಂಗು ಗುಂಡಿಯ ಒಡಲು ಸೇರುತ್ತಿದ್ದು, ಇದು ಕೊಳವೆ ಬಾವಿಯ ಮೂಲಕ ಪೊನ್ನಂಪೇಟೆ ನಾಗರಿಕರಿಗೆ ಕುಡಿಯುವ ನೀರಾಗಿ ಬಳಕೆಯಾಗುತ್ತಿದೆ. ನಾಗರಿಕರು ಮನೆಗಳಲ್ಲಿ ಅಳವಡಿಸಿದ ನಲ್ಲಿಯನ್ನು ಶೇಖರಣೆ ಮಾಡಿದರೆ ನೀರಿನಲ್ಲಿ ವೈರಾಣುಗಳು ಅಂತರ್ಜಲದಲ್ಲಿ ಸೇರಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಧ್ಯತೆ ಇದೆ. ಮಾಧÀ್ಯಮಗಳೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಸ್ಥಳೀಯರಾದ ಚೆಪ್ಪುಡಿರ ಸುಜು ಕರುಂಬಯ್ಯ ಕಳೆದ ಒಂದು ವಾರದಿಂದ ಕೊಳಚೆ ನೀರನ್ನು ನಾಗರಿಕರು ಹೇಳಿದಂತೆ ಇಲ್ಲಿ ಎಲ್ಲಾ ಕಲ್ಮಶಗಳು ಶೇಖರಣೆಯಾಗುತ್ತಿವೆÉ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಚರಂಡಿ ನೀರು ಇಂಗು ಗುಂಡಿಯಲ್ಲಿ ಶೇಖರಣೆಯಾಗದಂತೆ ಕ್ರಮ ಜರುಗಿಸಲಾಗುವದು. ಪಿ.ಡಿ.ಒ ಅಬ್ದುಲ್ಲಾರವರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.