ನಾಪೆÉÇೀಕ್ಲು, ಜೂ. 29: ಹಿಂದೆ ಕಾಳುಮೆಣಸನ್ನು ಅಂತರ ಬೆಳೆಯಾಗಿ ಬೆಳೆಯಲಾಗುತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಳುಮೆಣಸು ಬೆಳೆಯುವಲ್ಲಿ ಬೆಳೆಗಾರರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಮೂಲಕ ಇದನ್ನು ಬೆಳೆದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಕೃಷಿ ಅಧಿಕಾರಿ ಕೆ.ಎ. ದೇವಯ್ಯ ಹೇಳಿದರು.

ನಾಪೆÇೀಕ್ಲು ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿ ಯೇಷನ್ ಮತ್ತು ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಕ್ಲಬ್‍ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಳುಮೆಣಸು ಬೆಳೆಯ ಬಗ್ಗೆ ವಿಚಾರಣ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಾವದೇ ಬೆಳೆಯನ್ನು ಬೆಲೆಯ ಆಧಾರದಲ್ಲಿ ಕಡೆಗಣಿಸಬಾರದು. ಸಾಮಾನ್ಯವಾಗಿ ಜನರು ಕಾಫಿಗೆ ಹೆಚ್ಚಿನ ಧಾರಣೆ ಬಂದರೆ ಅದರತ್ತ ಹೆಚ್ಚಿನ ಒಲವು ತೋರಿಸುವದು, ಧಾರಣೆ ಕಡಿಮೆಯಾದರೆ ಕಾಳುಮೆಣ ಸಿನತ್ತ ವಾಲುವದು ಸರಿಯಲ್ಲ. ಎಲ್ಲಾ ಬೆಳೆಗಳ ಬಗ್ಗೆಯೂ ಮುತುವರ್ಜಿ ವಹಿಸಿದರೆ ವರಮಾನದಲ್ಲಿ ತೊಂದರೆಯಾಗದು ಎಂದರು. ಈ ಸಂದರ್ಭದಲ್ಲಿ ಕಾಳುಮೆಣಸಿನ ಗಿಡ ತಯಾರಿ, ರಸಗೊಬ್ಬರ ನಿರ್ವಹಣೆ, ನೀರು ಹಾಯಿಸುವ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸಜು ಜಾರ್ಜ್ ಮಾತನಾಡಿ, ಯಾವದೇ ಬೆಳೆಯನ್ನು ಫಲವತ್ತಾಗಿ ಬೆಳೆಸಬೇಕಾದರೆ ಮಣ್ಣಿನ ಪೋಷಕಾಂಶ ಮುಖ್ಯವಾಗಿದ್ದು ಪ್ರತಿಯೊಬ್ಬ ರೈತನು ತನ್ನ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ತಕ್ಕಂತೆ ಬೆಳೆಗಳಿಗೆ ಪೆÇೀಷಕಾಂಶÀ ನೀಡಿದರೆ ಮಾತ್ರ ಉತ್ತಮ ಇಳುವರಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಪ್ರಭಾಕರ್, ಜಿಲ್ಲಾ ನಬಾರ್ಡ್ ಬ್ಯಾಂಕ್ ಅಧಿಕಾರಿ ಮುಂಡಂಡ ಸಿ. ನಾಣಯ್ಯ, ಪ್ಲಾಂಟರ್ಸ್ ಕ್ಲಬ್ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಕಾರ್ಯಕ್ರಮ ಉದ್ಘಾಟಿಸಿ, ಅಪ್ಪಾರಂಡ ಸುಧೀರ್ ಅಯ್ಯಪ್ಪ, ಅಧ್ಯಕ್ಷತೆ ವಹಿಸಿ, ನಾಪೆÇೀಕ್ಲು ನಾಲ್ನಾಡ್ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಕಾಂಡಂಡ ಜಯ ಕರುಂಬಯ್ಯ, ಸ್ಮರಣ್ ಮಾತನಾಡಿದರು.