ವೀರಾಜಪೇಟೆ, ಜೂ. 29: ಭಯೋತ್ಪಾದನೆಯನ್ನು ಮೂಲದಿಂದ ಕಿತ್ತೊಗೆಯಲು ನಾವೆಲ್ಲರೂ ಒಂದಾಗಿ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಕಾರ್ಯಕಾರಿಣಿ ಸದಸ್ಯ ಸುರೇಶ್ ಪರ್ಕಳ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವೀರಾಜಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಶ್ರೀ ಗುರು ಪೂಜಾ ಉತ್ಸವ' ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಸುರೇಶ್ ಪರ್ಕಳ ಅವರು ಸಂಘಟನೆಯ ಕಾರ್ಯ ನಿರಂತರವಾಗಿ ನಡೆಯು ವಂತಾಗಬೇಕು. ನಮ್ಮ ಮೂಲ ಸಂಸ್ಕøತಿಯನ್ನು ಎಂದಿಗೂ ಮರೆಯಬಾರದು ಎಂದರು.

ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎ. ಲಕ್ಷ್ಮಿನಾರಾಯಣ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಸಂಘಚಾಲಕ್ ಪ್ರಿನ್ಸ್ ಗಣಪತಿ, ಪ್ರಚಾರಕ್ ಸುನಿಲ್ ರಾವ್, ಜಿಲ್ಲಾ ಸಂಘಚಾಲಕ್ ಚೆಕ್ಕೆರ ಮನು ಕಾವೇರಪ್ಪ, ಗೌತಮ್ ರಾವ್, ಕುಶನ್, ಮುಂತಾದವರು ಉಪಸ್ಥಿತರಿದ್ದರು.

ಸ್ವಯಂಸೇವಕ ಸಂಘದ ನಗರ ಪ್ರಮುಖ ಬಿ.ಎಲ್. ಪುರುಷೋತ್ತಮ ಸ್ವಾಗತಿಸಿ, ವಂದಿಸಿದರು.