ಮಡಿಕೇರಿ, ಜೂ. 30: ಕುಂಜಿಲ ಪಯ್‍ನರಿ ಜಮಾಅತ್ ಆಶ್ರಯದಲ್ಲಿ ಪ್ರತಿ ತಿಂಗಳ ಪ್ರಥಮ ಭಾನುವಾರದಂದು ನಡೆಯುತ್ತಿರುವ ಮಾಸಿಕ ಪಯ್‍ನರಿ ಸ್ವಲಾತ್ ತಾ.2ರಂದು ಸಂಜೆ 7 ಗಂಟೆಗೆ ಪಯ್‍ನರಿ ದರ್ಗಾ ಸಭಾಂಗಣದಲ್ಲಿ ನಡೆಯಲಿದೆ.

ಅಸ್ಸಯ್ಯಿದ್ ಮುಹ್‍ಸಿನ್ ಸೈದಲವಿ ಕೋಯಾ ಅಲ್ ಬುಖಾರಿ ನೇತೃತ್ವ ವಹಿಸಲಿದ್ದು, ವಾಗ್ಮಿ ಅಶ್ರಫ್ ಜೌಹರಿ ಎಮ್ಮೆಮಾಡು ಹಾಗೂ ಕುಂಜಿಲರವುಲತ್ತುಲ್ ಉಲೂಂ ದರ್ಸ್ ಇದರ ಮುದರ್ರಿಸ್ ಮುಖಶ್ಶಿರ್ ಅಹ್ಸನ್ ಅಲ್ ಕಾಮಿಲಿ ಉಪನ್ಯಾಸ ನೀಡಲಿದ್ದಾರೆ.