ಸುಂಟಿಕೊಪ್ಪ, ಜು. 1: ಕಾಡಾನೆಗಳ ಹಿಂಡು ಆಹಾರ ಅರಸಿ ಬಂದು ಶುಂಠಿ ಕೃಷಿ, ಗದ್ದೆಗೆ ಲಗ್ಗೆಯಿಟ್ಟು ಕಾಫಿ ತೋಟಕ್ಕೆ ನುಗ್ಗಿ ಗಿಡ, ಪೈಪ್ ಹಾಗೂ ಹುಲ್ಲಿನ ಮೆದೆಯನ್ನು ನಾಶಪಡಿಸಿವೆ.

ಕೊಡಗರಹಳ್ಳಿ ಸ್ಕೂಲ್‍ಬಾಣೆ ನಿವಾಸಿ ಎಂ.ಎ. ಬೋಪಯ್ಯ ಅವರು ಶುಂಠಿ ಕೃಷಿ ಮಾಡಿದ ಗದ್ದೆಗೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಶುಂಠಿ ಪೈರನ್ನು ತುಳಿದು ನಾಶಪಡಿಸಿದಲ್ಲದೆ ಕಾಫಿ ತೋಟಕ್ಕೆ ನುಗ್ಗಿ ಗಿಡಗಳನ್ನು ನಾಶಪಡಿಸಿದೆ.

ಇದರಿಂದ ಬೋಪಯ್ಯ ಅವರು ಬೆಳೆಸಿದ ಶುಂಠಿ ಬೆಳೆ ನಾಶವಾಗಿದ್ದು, ಕೈಗೆ ಬಂದ ಶುಂಠಿ ಕೃಷಿ ಬಾಯಿಗೆ ಸಿಗದಂತಾಗಿದೆ. ಗದ್ದೆಗೆ ನೀರು ಹಾಯಿಸಲು ಅಳವಡಿಸಲಾಗಿದ್ದ ಪೈಪ್‍ಗಳನ್ನು ನಾಶಪಡಿಸಿದ ಕಾಡಾನೆಗಳ ಹಿಂಡು ಮನೆಯ ಸಮೀಪದಲ್ಲಿ ಶೇಖರಿಸಿ ಇಡಲಾಗಿದ್ದ ಹುಲ್ಲಿನ ಮೆದೆಯನ್ನು ಧ್ವಂಸಗೊಳಿಸಿವೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ಎಂದು ಕೃಷಿಕ ಬೋಪಯ್ಯ ತಿಳಿಸಿದರು.