* ಗೋಣಿಕೊಪ್ಪಲು, ಜು. 1: ಕಂದಕಕ್ಕೆ ಬಿದ್ದು ನರಳಾಡುತ್ತಿದ್ದ ಆನೆಮರಿಯನ್ನು ಮತ್ತೆ ಕಾಡು ಸೇರಿಸಿದ ಘಟನೆ ತಿತಿಮತಿ ಸಮೀಪದ ತಾರಿಕಟ್ಟೆ ಎಂಬಲ್ಲಿ ನಡೆದಿದೆ. ತಿತಿಮತಿ ವಲಯ ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಕಾಡು ಸೇರಿಸುವಲ್ಲಿ ಯಶಸ್ವಿಯಾಗಿದೆ.

ಶನಿವಾರ ಬೆಳಿಗ್ಗೆ ಬಿದ್ದಿದ್ದ ಸುಮಾರು 10 ತಿಂಗಳ ಗಂಡು ಆನೆ ಮರಿಯನ್ನು ಹಗ್ಗದ ಸಹಾಯದಿಂದ ಮೇಲೆತ್ತಲಾಯಿತು. ಗುಂಡಿಯಿಂದ ಮೇಲೆದ್ದ ಮರಿ ಸಮೀಪವಿದ್ದ ಜನ ವಸತಿ ಪ್ರದೇಶದತ್ತ ಓಡಾಡುವ ಮೂಲಕ ಕಾರ್ಯಾಚರಣೆ ತಂಡಕ್ಕೆ ಸಮಸ್ಯೆಯಾಗಿ ಪರಿಣಮಿಸಿತು. ನಂತರ ಹಗ್ಗದಲ್ಲಿ ಕಟ್ಟಿಕೊಂಡು ರಸ್ತೆಯ ಮೂಲಕ ಕಾಡಿಗೆ ಸೇರಿಸುವ ಪ್ರಯತ್ನ ಮಾಡಿತು. ಅಲ್ಲಿ ಬೇರೆ ಆನೆಯ ಹಿಂಡು ಇದ್ದ ಕಾರಣಕ್ಕೆ ಮತ್ತೆ ಕಾಡಿನಿಂದ ಹೊರ ಬಂದು ಕಾರ್ಯಾಚರಣೆ ತಂಡದಲ್ಲಿ ಆತಂಕ ಹೆಚ್ಚಿಸಿತು.

ಮತ್ತೆ ತಂಡವು ಆನೆಯನ್ನು ಕಾಡಿನ ಮತ್ತೊಂದು ಜಾಗಕ್ಕೆ ಸೇರಿಸಿತು. ತಂಡದಲ್ಲಿ ಸಂಜು, ಗಣಪತಿ, ದೇವರಾಜು, ರಮೇಶ, ಸುರೇಶ್, ದಿನೇಶ್, ಮೋಹನ್ ಹಾಗೂ ಸತೀಶ್ ಕಾರ್ಯಾಚರಣೆ ನಡೆಸಿದರು. ಈ ಸಂದÀರ್ಭ ಎಸಿಎಫ್ ಶ್ರೀಪತಿ, ಆರ್‍ಎಫ್‍ಓ ಅಶೋಕ್ ಪಾಲ್ಗೊಂಡಿದ್ದರು.