ಮಡಿಕೇರಿ, ಜು.1: ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ವಿರುದ್ಧ ಹಕ್ಕು ಬಾಧ್ಯತಾ ಸಮಿತಿ ಸಲ್ಲಿಸಿದ ವರದಿಯನ್ವಯ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿರುವ ಶಾಸನ ಸಭೆಯ ನಿರ್ಣಯದಿಂದಾಗಿ ವಿಧಾನಸಭೆಯ ಮಾನ ಬೀದಿಯಲ್ಲಿ ಹರಾಜಾ ದಂತಾಗುತ್ತದೆ ಎಂದು ಹಿರಿಯ ವಕೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಟೀಕಿಸಿದ್ದಾರೆ.

ಕೊಡಗು ಪತ್ರಕರ್ತರ ವೇದಿಕೆ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಪ್ರೆಸ್‍ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ

(ಮೊದಲ ಪುಟದಿಂದ) ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವದೇ ಶಾಸಕರಾಗಲೀ, ಸಚಿವರಾಗಲಿ, ಸಂಸದರಾಗಲಿ ಅವರ ವಿರುದ್ಧ ಪ್ರಕಟವಾಗುವ ವೈಯಕ್ತಿಕ ವರದಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು. ಹೊರತಾಗಿ ಇಂತಹ ಪ್ರಕರಣಗಳು ಹಕ್ಕು ಚ್ಯುತಿ ವ್ಯಾಪ್ತಿಗೆ ಒಳಪಡುವದಿಲ್ಲ. ಶಾಸಕರು ಅಥವಾ ಸಂಸದರು ನಿರ್ಭೀತಿಯಿಂದ ಕೆಲಸ ಮಾಡಲು ಅಡ್ಡಿ ಮಾಡುವ ವರದಿಗಳು ಮಾತ್ರ ಹಕ್ಕು ಚ್ಯುತಿಗೆ ಒಳಪಡುತ್ತವೆ. ಆದ್ದರಿಂದ ರವಿ ಬೆಳಗೆರೆ ಹಾಗೂ ಅನಿಲ್‍ರಾಜ್ ಪ್ರಕರಣದಲ್ಲಿ ಅವರುಗಳು ನ್ಯಾಯಾಲಯದ ಮೆಟ್ಟಿಲೇರಿ ಅಲ್ಲಿ ಶಾಸನ ಸಭೆಯ ತೀರ್ಮಾನವನ್ನು ನ್ಯಾಯಾಲಯ ತಿರಸ್ಕರಿಸಿದರೆ ವಿಧಾನಸಭೆಯ ಮಾನ ಹೋದಂತಾಗುತ್ತದೆ ಎಂದು ಎಕೆಎಸ್ ವಿವರಿಸಿದರು. ಮಾತ್ರವಲ್ಲದೆ ಶಿಕ್ಷೆ ವಿಧಿಸುವ ಮುನ್ನ ಆರೋಪ ಹೊತ್ತಿರುವವರಿಗೂ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕಿತ್ತು. ಆದರೆ ಅದನ್ನೂ ನಿರಾಕರಿಸಿರುವ ವಿಧಾನಸಭೆಯ ಕ್ರಮ ಸರಿಯಲ್ಲ ಎಂದರಲ್ಲದೆ, ಪತ್ರಕರ್ತರಿಗೆ ಇರುವಂತಹ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವಂತೆ ಸಲಹೆಯಿತ್ತರು. ಪ್ರಸ್ತುತ ಮಾಧ್ಯಮಗಳು ಹಾಗೂ ಪತ್ರಿಕೆಗಳು ಅವುಗಳ ಮಾಲೀಕರ ಮನಸ್ಥಿತಿಗೆ ಅನುಗುಣವಾಗಿ ಸುದ್ದಿಯನ್ನು ಮಾಡುತ್ತಿವೆ ಹೊರತಾಗಿ ನೈಜತೆಗೆ ಒತ್ತು ನೀಡುತ್ತಿಲ್ಲ ಎಂದು ಸುಬ್ಬಯ್ಯ ವಿಷಾದಿಸಿದರು.

ನಿರ್ಭೀತ ವರದಿಯಿರಲಿ : ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಗಡಿನಾಡ ಸಂಚಾರಿ ವಾರಪತ್ರಿಕೆ ಸಂಪಾದಕರು, ರೇಷ್ಮೆ ಮಂಡಳಿಯ ಅಧ್ಯಕ್ಷರೂ ಆದ ಟಿ.ಪಿ. ರಮೇಶ್ ಮಾತನಾಡಿ, ಪ್ರಸ್ತುತ ಕೆಲ ಮಾಧ್ಯಮಗಳು ಪೈಪೋಟಿಯಿಂದಾಗಿ ಇಲ್ಲದ ಸುದ್ದಿಗಳನ್ನು ಸೃಷ್ಟಿಸುವ ಕೆಲಸಕ್ಕೆ ಕೈ ಹಾಕುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕೇವಲ ಟಿಆರ್‍ಪಿ ಒಂದೇ ಮಾಧ್ಯಮಗಳಿಗೆ ಮುಖ್ಯವಾಗಬಾರದು. ಪತ್ರಿಕೆಗಳಿಗೂ ಜಾಹೀರಾತುಗಳು ಮಾತ್ರ ಮುಖ್ಯವಲ್ಲ. ಸತ್ಯ ಹಾಗೂ ನ್ಯಾಯಯುತ ವರದಿ ಮಾಡುವ ಮೂಲಕ ಮಾಧ್ಯಮಗಳು ಹಾಗೂ ಪತ್ರಿಕೆಗಳು ನೈತಿಕ ಜವಾಬ್ದಾರಿಯಿಂದ ನಿರ್ಭೀತವಾಗಿ ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ಮಕ್ಕಳಲ್ಲಿ ಪತ್ರಿಕೋದ್ಯಮದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಅಭಿಪ್ರಾಯಿಸಿದರು.

ಅಧ್ಯಕ್ಷತೆಯನ್ನು ಪತ್ರಿಕಾ ಭವನ ಮ್ಯಾನೇಜಿಂಗ್ ಟ್ರಸ್ಟಿ ಮನುಶೆಣೈ ವಹಿಸಿ, ಪ್ರಾಸ್ತಾವಿಕ ನುಡಿಯಾಡಿದರು. ಕೊಡಗು ಪತ್ರಕರ್ತರ ವೇದಿಕೆ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ, ಪ್ರಧಾನ ಕಾರ್ಯದರ್ಶಿ ಶ್ರೀಧರ ಹೂವಲ್ಲಿ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಕೇಶವಕಾಮತ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನೀಲಮ್ಮ ಪ್ರಾರ್ಥಿಸಿ, ಪತ್ರಕರ್ತ ಮಧೋಶ್ ಪೂವಯ್ಯ ನಿರೂಪಿಸಿದರು.

ಪತ್ರಿಕಾ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ‘ನೋಟು ಅಪಮೌಲ್ಯೀಕರಣದಿಂದ ದೇಶದ ಆರ್ಥಿಕ ವ್ಯವಸ್ಥೆಯ ಪರಿಣಾಮ’ ವಿಚಾರ ಕುರಿತಾದ ಭಾಷಣ ಸ್ಪರ್ಧೆಯನ್ನು ಫೀ.ಮಾ. ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಧರ್ ಹೆಗಡೆ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಫೀ.ಮಾ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿ ಟಿ.ಆರ್. ವರ್ಷ ಪ್ರಥಮ, ವೀರಾಜಪೇಟೆ ಕಾವೇರಿ ಕಾಲೇಜಿನ ಗಗನ್ ದ್ವಿತೀಯ, ಕಾವೇರಿ ಕಾಲೇಜಿನ ತೊಪ್ಸಿನಾ ಪಿ.ವೈ. ತೃತೀಯ ಬಹುಮಾನ