(ನಿನ್ನೆಯ ಸಂಚಿಕೆಯಿಂದ) ಈ ಒಂದು ಗಾಡ್ಗಿಲ್ ವರದಿಗೆ ಪರಿಸರವಾದಿಗಳಿಂದಲೇ ವಿರೋಧ ಬಂದಿದ್ದಲ್ಲದೆ ಈ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಅನುಷ್ಠಾನಗೊಂಡರೆ ರಾಜ್ಯ ಸರ್ಕಾರಗಳ ಆದಾಯಕ್ಕೆ ಕಡಿವಾಣ ಬೀಳಲಿದೆ. ಅದೂ ಅಲ್ಲದೆ ಇದರ ವಿರುದ್ಧ ಅಂದಿನ ಆಡಳಿತ ಪಕ್ಷದವರೇ ತಿರುಗಿ ಬಿದ್ದದ್ದು ಏಕೆಂದರೆ ಅಂದಿನ ಗಣಿ ಹಾಗೂ ಮರಳು ಮಾಫಿಯಾಗಳು ಸರ್ಕಾರವನ್ನು ನಿಯಂತ್ರಿಸುತ್ತಿತ್ತು ! ಇದರ ವಿರುದ್ಧ ಮೊದಲು ಹೋರಾಟ ಪ್ರಾರಂಭವಾದದ್ದು ಕೇರಳ ರಾಜ್ಯದಲ್ಲಿ. ವರದಿಯ ಪ್ರತಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದಾಗ ಕೇರಳ ಸರ್ಕಾರ ಕೋರ್ಟ್ ಮೆಟ್ಟಿಲೇರಬೇಕಾಯಿತು. ಕೊನೆಗೆ ವರದಿಯನ್ನು ಪರಿಸರ ಇಲಾಖೆಯ ಜಾಲತಾಣದಲ್ಲಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಇದರ ವಿರುದ್ಧ ಜನರು ಬೀದಿಗಿಳಿದರು. ಜನರ ಹೋರಾಟಕ್ಕೆ ಮಾಫಿಯಾಗಳು ಬೆಂಬಲವಾಗಿ ನಿಂತವು. ಗಣಿ, ಮರಳು ಹಾಗೂ ಮರ ಮಾಫಿಯಾದವರು ಸ್ಥಳೀಯ ಶಾಸಕರನ್ನು ತಮ್ಮ ತೆಕ್ಕೆಯಲ್ಲಿ ಬಳಸಿಕೊಂಡು ಇದರ ವಿರುದ್ಧ ಜನರಲ್ಲಿ ಭಯ ಉದ್ಭವಿಸಲು ಪ್ರಾರಂಭಿಸಿದರು. ಮುಖ್ಯವಾಗಿ ಅವರು ಅಂದು ಹೇಳಿದ್ದು ಒಂದೇ ವಾಕ್ಯ ‘‘ನಿಮ್ಮನ್ನೆಲ್ಲಾ ಇಲ್ಲಿಂದ ಒಕ್ಕಲೆಬ್ಬಿಸಲಾಗುವದು. ನೀವು ನಿಮ್ಮ ಮನೆ, ಮಠ, ಆಸ್ತಿ, ಪಾಸ್ತಿ, ದನ, ಕರುಗಳನ್ನು ಕಳೆದುಕೊಳ್ಳುವಿರಿ’’ ಜನರನ್ನು ರೊಚ್ಚಿಗೆಬ್ಬಿಸಲು ಇಷ್ಟು ಸಾಕಾಯಿತು. ಇಲ್ಲಿ ಇನ್ನೊಂದು ಪ್ರಮುಖ ವಿಚಾರವೇನೆಂದರೆ ಯಾರು ಕೂಡ 522 ಪುಟಗಳ ಇಂಗ್ಲೀಷ್ ವರದಿಯನ್ನು ಓದಿ ಅರ್ಥೈಸುವ ಗೋಜಿಗೆ ಹೋಗಿಲ್ಲ. ಮಂತ್ರಿಗಳು, ಶಾಸಕರು, ಮಾಫಿಯಾ ಧಣಿಗಳು ಹೇಳಿದ ಸುಳ್ಳನ್ನೇ ಸತ್ಯವೆಂದು ಜನರು ನಂಬಿಬಿಟ್ಟರು. ಜನರ ಆಕ್ರೋಶ ಹೆಚ್ಚಾದಂತೆಲ್ಲಾ ಕೇಂದ್ರ ಸರ್ಕಾರ ಗಾಡ್ಗಿಲ್ ವರದಿಯ ಲೋಪವನ್ನು ಸರಿಪಡಿಸಲು ಹಾಗೂ ಮತ್ತೊಂದು ಹೊಸ ವರದಿಯನ್ನು ಸಿದ್ಧಪಡಿಸಲು ಡಾ|| ಕಸ್ತೂರಿ ರಂಗನ್‍ರವರ ಅಧ್ಯಕ್ಷತೆಯಲ್ಲಿ 10 ಮಂದಿಯ ಒಂದು ಉನ್ನತ ಮಟ್ಟದ ಕಮಿಟಿಯನ್ನು ರಚಿಸಲಾಯಿತು. ಕಸ್ತೂರಿರಂಗನ್ ವರಸಿ ಪ್ರಕಾರ ಗಾಡ್ಗಿಲ್ ವರದಿಯ 1,29,037 ಚದರ ಕಿಲೋಮೀಟರ್ ಬದಲು 1,64,280 ಚ.ಕಿ.ಮೀ. ಭೂ ಪ್ರದೇಶ ಹೆಚ್ಚಾಯಿತು. ಗಾಡ್ಗಿಲ್ ವರದಿಯಲ್ಲಿ ಶೇ. 60 ರಷ್ಟು ಪ್ರದೇಶವನ್ನು ಇSZ-1 ಜಾರಿಗೊಳಿಸಬೇಕು ಎಂಬದನ್ನು ಶೇ. 37 ಕ್ಕೆ ಇಳಿಸಿದರು. ಮರಳು, ಕಲ್ಲು ಗಣಿಗಾರಿಕೆ ಹಾಗೂ ಎಲ್ಲಾ ರೀತಿಯ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸತಕ್ಕದ್ದು. ಪ್ರಸ್ತುತ ಇರುವ ಗಣಿಗಳ ಪರವಾನಗಿಗಳನ್ನು ಮುಂದಕ್ಕೆ ನವೀಕರಿಸಬಾರದು, ಶೇ. 63 ರಷ್ಟು ಪ್ರದೇಶದಲ್ಲಿ ಮಾನವನ ವಾಸ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಕಾಶ, ಅದೇ ಗಾಡ್ಗಿಲ್ ವರದಿಯಲ್ಲಿ ಶೇ. 90 ರಷ್ಟು ನಿಷೇಧಿಸಿದ್ದರು. ಅಣುಸ್ಥಾವರ, ದೊಡ್ಡ ಕೈಗಾರಿಕೆಗಳು, ಅಣೆಕಟ್ಟೆಗಳು, ಜಲವಿದ್ಯುತ್ ಯೋಜನೆಗಳು, 500 ಕೆ.ವಿ.ಎ. ಗಿಂತ ಹೆಚ್ಚು ವಿದ್ಯುತ್ ಪ್ರಸರಣಾ ಕೆಂದ್ರಗಳು ಹಾಗೂ ವಾಯು ಮಾಲಿನ್ಯ, ಜಲ ಮಾಲಿನ್ಯ ಮಾಡುವ ಕಾರ್ಖಾನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮ ಘಟ್ಟದ 188 ತಾಲೂಕುಗಳಲ್ಲಿ ಕೃಷಿ ಚಟುವಟಿಕೆ, ತೋಟಗಾರಿಕೆ, ಸಣ್ಣ ಪ್ರಮಾಣದ ಹೈನುಗಾರಿಕೆ, ಕೋಳಿ, ಹಂದಿ, ಮೀನು, ಕುರಿ ಸಾಕಾಣಿಕೆಗೆ ಯಾವದೇ ರೀತಿಯ ನಿರ್ಬಂಧವಿಲ್ಲ. ಗಾಡ್ಗಿಲ್ ವರದಿಯಲ್ಲಿದ್ದ 1,29,037 ಚ. ಕಿ. ಮೀ. ಪ್ರದೇಶವು ಕಸ್ತೂರಿ ರಂಗನ್ ವರದಿಯಲ್ಲಿ 1,64,280 ಚ.ಕಿ.ಮೀ. ಆಗಿ ಹೆಚ್ಚಾಯಿತು. ಗಾಡ್ಗಿಲ್ ವರದಿಯಲ್ಲಿ ಶೇ. 60 ರಷ್ಟಿದ್ದ ಸೂಕ್ಷ್ಮ ಪರಿಸರ ತಾಣವು ಕಸ್ತೂರಿ ರಂಗನ್ ವರದಿಯಲ್ಲಿ ಶೇ. 30ರಷ್ಟು ಇಳಿಕೆಯಾಯಿತು. ಗಾಡ್ಗಿಲ್ ವರದಿಯಲ್ಲಿದ್ದ 142 ಜನ ವಸತಿ ತಾಲೂಕುಗಳು ಕಸ್ತೂರಿ ರಂಗನ್ ವರದಿಯಲ್ಲಿ 188 ತಾಲೂಕುಗಳಾದವು.

ಇವೆರಡು ವರದಿಗಳ ಬೆಳವಣಿಗೆಯ ಮಧ್ಯದಲ್ಲಿ ಕೇರಳ ಸರ್ಕಾರ ತಮ್ಮದೇ ಆದ ಒಂದು ಸಮಿತಿಯನ್ನು ಅಂದಿನ ಮುಖ್ಯಮಂತ್ರಿ ಓಮನ್ ಚಾಂಡಿ ನೇತೃತ್ವದಲ್ಲಿ ರಚಿಸಿ ಅದಕ್ಕೆ ವಿ. ಓಮ್ಮನ್ ಕಮಿಟಿ ಎಂದು ಕರೆದು 15 ಮಂದಿ ಪರಿಣಿತರ ತಂಡವನ್ನು ರಚಿಸಿ ಕಸ್ತೂರಿ ರಂಗನ್ ವರದಿಯ ಸಾಧಕ ಭಾದಕಗಳನ್ನು ಅಧ್ಯಯನ ಮಾಡಿ ಅವರ ರಾಜ್ಯಕ್ಕೆ ಬೇಕಾದ ಹಾಗೆ ಒಂದು ಹೊಸ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಆ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರವು ಕೆಲವೊಂದು ಮಾರ್ಪಾಟಿಗೆ ಅಸ್ತು ನೀಡುತ್ತದೆ. ಇದರ ಪ್ರಕಾರ ಇSZ ಬದಲು ಇಈಐ (ಇಟಿviಡಿoಟಿmeಟಿಣಚಿಟಟಥಿ ಈಡಿಚಿziಟe ಐಚಿಟಿಜ) ಸ್ಥಾಪನೆ ಕೇರಳ ರಾಜ್ಯದ ಅರಣ್ಯ ಹಾಗೂ ಕೃಷಿ ಪ್ರದೇಶಗಳ ಉಪಗ್ರಹ ಮುಖಾಂತರ ಸರ್ವೆ, ತಮ್ಮ ರಾಜ್ಯದ 123 ಹಳ್ಳಿಗಳ ಪಕ್ಕದಲ್ಲಿ ಇರುವ ಅರಣ್ಯ ಪ್ರದೇಶಕ್ಕೆ ಶಾಶ್ವತವಾಗಿ ಬೇಲಿ ನಿರ್ಮಾಣ, ಆ ಹಳ್ಳಿಗಳಲ್ಲಿನ ಮಾನವನ ಶೇಕಡವಾರು ಇರುವಿಕೆ ಹಾಗೂ ಅವರಿಂದ ಅರಣ್ಯಕ್ಕೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಕ್ರಮ ಈ ಪ್ರದೇಶದ ಕೃಷಿಕರಿಗೆ ಯಾವದೇ ರೀತಿಯ ನಿರ್ಬಂಧ ಹೇರಬಾರದು. ದೊಡ್ಡ ಪ್ರಮಾಣದ ಹೈನುಗಾರಿಕೆ ಹಾಗೂ ಆಧುನಿಕ ಕೃಷಿ ಪದ್ಧತಿಗೆ 5 ವರ್ಷದ ಬದಲು 10 ವರ್ಷದ ತನಕ ವಿನಾಯಿತಿ.

ಇಲ್ಲಿ ಈ ವರದಿಗಳನ್ನು ಸಂಪೂರ್ಣ ನಿಷೇಧಿಸಬೇಕು ಹಾಗೂ ಅವುಗಳನ್ನು ಯಾವದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು ಎಂದು ಬೀದಿಗಿಳಿಯಲು ಕಾರಣ, ಕೇವಲ ಕೆಲವು ರಾಜಕಾರಣಿಗಳ ಪಿತೂರಿ ಹಾಗೂ ಪ್ರಚೋದನೆಗಳು. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರಿಗೆ ಇದ್ದ ಆತಂಕವೇನೆಂದರೆ ‘‘ನಿಮ್ಮನ್ನೆಲ್ಲ ಇಲ್ಲಿಂದ ಒಕ್ಕಲೆಬ್ಬಿಸುತ್ತಾರೆ’’ ಎಂಬ ಪಟ್ಟಬದ್ಧ ಹಿತಾಸಕ್ತರು ವದಂತಿಗಳಿಂದ ಜನರು ಯಾರೇ ಇದರ ಪರ ಮಾತನಾಡಿದರೂ ಅವರನ್ನು ಅಲ್ಲೇ ಜಗ್ಗಾಡುತ್ತಿದ್ದರು. ರಾಜಕೀಯ ಪಕ್ಷಗಳು ಕಳೆದ ಚುನಾವಣೆಗೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಮುಗ್ಧ ಜನರಿಗೆ ಹೆದರಿಸಿ ಓಟು ಪಡೆದವರು ಇಂದು ಉಲ್ಟಾ ಹೊಡೆದಿದ್ದಾರೆ. ಅಂದು ಇದನ್ನು ಮಾರಕ ಯೋಜನೆ ಎಂದು ಕರೆದವರು ಇಂದು ಇದು ಜನರಿಗೆ ಪೂರಕ ಎಂದು ಹೇಳುವದರ ಮೂಲಕ ತಮ್ಮ ದ್ವಂದ್ವತ್ವವನ್ನು ಪ್ರದರ್ಶಿಸಿದ್ದಾರೆ.

ಇನ್ನು ಸೂಕ್ಷ್ಮ ಪರಿಸರ ತಾಣ ಹಾಗೂ ಕಸ್ತೂರಿ ರಂಗನ್ ವರದಿ ಎರಡೂ ಬೇರೆ-ಬೇರೆ ಎಂದು ವಾದಿಸುವ ಜನಸೇವಕರೇ ಇSZ ಸೂಕ್ಷ್ಮ ಪರಿಸರ ತಾಣ ಎಂಬದನ್ನು ಕಸ್ತೂರಿ ರಂಗನ್ ವರದಿಯ ಮೊದಲನೆಯ ಮುಖ್ಯ ಘಟ್ಟವಾಗಿದೆ.

2013ನೇ ನವೆಂಬರ್‍ನಲ್ಲಿ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಲು ಆಯಾ ರಾಜ್ಯಗಳಿಗೆ ತುರ್ತು ಸಂದೇಶ ಕಳುಹಿಸಿದ ಪರಿಣಾಮ ಎಲ್ಲಾ ರಾಜ್ಯಗಳಲ್ಲೂ ಹೋರಾಟಗಳು ಪ್ರಾರಂಭವಾದವು. ಕೊನೆಗೆ ಕೇಂದ್ರ ಸರ್ಕಾರ ಈ ಎಲ್ಲಾ ರಾಜ್ಯಗಳ ಕ್ಯಾಬಿನೆಟ್ ಸಲಹೆ ಹಾಗೂ ವರದಿಯನ್ನು ಪಡೆದುಕೊಂಡು ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಸಹಕಾರ ಕೇಳಿತು. ಎಲ್ಲಾ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಈ ವಿಚಾರವು ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಓಚಿಣioಟಿಚಿಟ ಉಡಿeeಟಿ ಖಿಡಿibuಟಿಚಿಟ (ಓ.ಉ.ಖಿ.) ಗ್ರೀನ್ ಬೆಂಚಿನ ನ್ಯಾಯಮೂರ್ತಿ ಗಳಾದ ಸ್ವತಂತ್ರ ಕುಮಾರ್ ಕೇಂದ್ರ ಸರ್ಕಾರಕ್ಕೆ 25 ಸಾವಿರ ದಂಡ ವಿಧಿಸಿದ್ದಲ್ಲದೆ ಇSZ ಸೂಕ್ಷ್ಮ ಪರಿಸರ ತಾಣ ಪ್ರದೇಶವನ್ನು ಆದಷ್ಟು ಬೇಗ ನಿರ್ಧರಿಸುವಂತೆ ಹಾಗೂ ಆದೇಶ ಹೊರಡಿಸುವಂತೆ ಪರಿಸರ ಮಂತ್ರಾಲಯಕ್ಕೆ ಆದೇಶ ನೀಡಿದ ಪರಿಣಾಮವೇ ಇಂದು ಕಸ್ತೂರಿ ರಂಗನ್ ವರದಿಯ ಮೊದಲ ಹಂತವಾದ ಸೂಕ್ಷ್ಮ ಪರಿಸರ ತಾಣ ಘೋಷಣೆ ಆಗಿದೆ.

ಈ ವರದಿಯ ವಿರುದ್ಧ ಅಂದು ಯಾರೆಲ್ಲ ಮುಂದಾಳತ್ವ ವಹಿಸಿದ್ದರೋ ಇಂದು ಅವರೆಲ್ಲ ನಾಪತ್ತೆ ! ಕೆಲವು ರಾಜಕೀಯ ಪಕ್ಷಗಳ ಮುಖಂಡರಲ್ಲದೇ ಪ್ರತ್ಯೇಕವಾದಿಗಳು ತಮ್ಮ ಸಂಘಟನೆ ಹೊಟ್ಟೆಪಾಡಿಗೂ ಇದನ್ನು ಬಳಸಿಕೊಂಡವು.

ಈ ವರದಿಯ ಸತ್ಯಾಸತ್ಯತೆಯನ್ನು ಯಾರೂ ಕೂಡ ಜನರಲ್ಲಿ ಹೇಳಲಿಲ್ಲ. ಬಹುಶಃ 522 ಪುಟಗಳ ಈ ವರದಿಯನ್ನು ಸಂಪೂರ್ಣವಾಗಿ ಓದುವ ಗೋಜಿಗೆ ಯಾರೂ ಹೋಗದೆ ಇಂಗ್ಲೀಷ್‍ನಲ್ಲಿರುವ ವರದಿಯನ್ನು ಕನ್ನಡಕ್ಕೆ ಅನುವಾದ ಮಾಡದೆ ಇದ್ದದ್ದು ಇದೇ ಕಾರಣಕ್ಕಾಗಿಯೇ.

- ಮಚ್ಚಮಾಡ ಅನೀಶ್ ಮಾದಪ್ಪ.