ಮಡಿಕೇರಿ, ಜು. 3: ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಗೆ 73.38 ಇಂಚು ಮಳೆ ದಾಖಲಾಗಿದೆ. ಇನ್ನು ಭಾಗಮಂಡಲ ಸುತ್ತಮುತ್ತ ಪ್ರಸಕ್ತ ದಿನದ ತನಕ 62.14 ಇಂಚು ಮಳೆಯಾಗಿದೆ. ದಕ್ಷಿಣ ಕೊಡಗಿನ ಬಿರುನಾಣಿ ವ್ಯಾಪ್ತಿಯಲ್ಲಿ 54.16 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ ತಲಕಾವೇರಿ ಸುತ್ತಮುತ್ತ 62 ಇಂಚು ಮಳೆಯಾಗಿತ್ತು.ಪ್ರಸಕ್ತ ಜಿಲ್ಲೆಯಲ್ಲಿ ಇದುವರೆಗೆ 29.27 ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ವೇಳೆಗೆ 29.78 ಇಂಚು ಸರಾಸರಿ ಮಳೆ ದಾಖಲಾಗಿತ್ತು ಮಡಿಕೇರಿ ತಾಲೂಕಿನಲ್ಲಿ ಈ ಸಾಲಿನಲ್ಲಿ

(ಮೊದಲ ಪುಟದಿಂದ) ಒಟ್ಟು 39.12 ಇಂಚು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 26.95 ಇಂಚು ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 21.73 ಇಂಚು ಸರಾಸರಿ ಮಳೆಯಾಗಿದೆ.

ಕಳೆದ ವರ್ಷ ಇದೇ ಅವಧಿಗೆ ಮಡಿಕೇರಿ ತಾಲೂಕಿನಲ್ಲಿ 43.90 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 22.32 ಇಂಚು ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 23.13 ಇಂಚು ಮಳೆ ದಾಖಲಾಗಿತ್ತು. ಗ್ರಾಮೀಣ ಭಾಗದ ಕೆಲವೆಡೆ ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಅಧಿಕ ಮಳೆಯಾದರೆ, ಕೆಲವೆಡೆ ಹಿನ್ನೆಡೆಯೂ ಗೋಚರಿಸಿದೆ. ಹಾರಂಗಿ ಜಲಾಶಯ ನೀರಿನ ಮಟ್ಟ ಗರಿಷ್ಠ 2859 ಅಡಿಗಳಾದರೆ, ಪ್ರಸಕ್ತ 2825.16 ಅಡಿಯಿದ್ದು, 467 ಕ್ಯೂಸೆಕ್ ನೀರು ಒಳ ಬರುತ್ತಿದೆ. ಕಳೆದ ವರ್ಷ ಈ ವೇಳೆಯಲ್ಲಿ 2206 ಕ್ಯೂಸೆಕ್ ನೀರು ಜಲಾಶಯಕ್ಕೆ ಬರುತ್ತಿತ್ತು.