ವೀರಾಜಪೇಟೆ, ಜು.3: ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 21 ರಾಸುಗಳನ್ನು ಹಿಂದೂ ಸಂಘಟನೆಗಳ ಸದಸ್ಯರು ರಕ್ಷಿಸಿ ಎಲ್ಲಾ ರಾಸುಗಳನ್ನು ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿಸಿ ಪ್ರಕರಣ ದಾಖಲಿಸಿದ್ದಾರೆ.ಹಾಸನ ಜಿಲ್ಲೆಯ ಹೊಳೆ ನರಸಿಪುರದಿಂದ ವೀರಾಜಪೇಟೆಯ ಮೂಲಕ ಕೇರಳ ರಾಜ್ಯಕ್ಕೆ 3 ವಾಹನಗಳಲ್ಲಿ ಜಾನುವಾರಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಸುಳಿವಿನ ಮೇರೆ ಹಿಂದೂ ಸಂಘಟನೆಗಳ ಪರಿವಾರದ ಸದಸ್ಯರು ಇಂದು ಬೆಳಿಗ್ಗೆ ಮಾಕುಟ್ಟದ ಅರಣ್ಯ ಚೆಕ್ ಪೋಸ್ಟ್ ಬಳಿ ವಾಹನಗಳನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಶೋಧಿಸಿದಾಗ ಮೂರು ವಾಹನಗಳಲ್ಲಿ ರಾಸುಗಳು ಪತ್ತೆಯಾದ ಹಿನೆÀ್ನಲೆಯಲ್ಲಿ 2 ವಾಹನಗಳು ಹಾಗೂ 21 ರಾಸುಗಳನ್ನು ಗ್ರಾಮಾಂತರ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಇನ್ನೊಂದು ವಾಹನ ರಾಸುಗಳ ಸಮೇತ ಕೇರಳಕ್ಕೆ ಪರಾರಿಯಾಗಿದೆ. ಎರಡು ವಾಹನಗಳಲ್ಲಿ ಒಟ್ಟು 21 ರಾಸುಗಳಿದ್ದವು. ನಿನ್ನೆ ದಿನ ಹಾಸನದ ಮಾರುಕಟ್ಟೆಯಲ್ಲಿ ರಾಸುಗಳನ್ನು ಕೇರಳದ ವ್ಯಾಪಾರಿಗಳು ಖರೀದಿಸಿದ್ದರು. ಕೇರಳದ ಕಸಾಯಿಖಾನೆಗೆ ತಲುಪಿಸಿದರೆ ಚಾಲಕರಿಗೆ ತಲಾ 700 ರೂ ನೀಡುವದಾಗಿ ಚಾಲಕರುಗಳಾದ ಮಂಡ್ಯದ ನವೀನ್, ಕಿಕ್ಕೇರಿಯ ಲೋಕೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಈ ಇಬ್ಬರು ಚಾಲಕರುಗಳನ್ನು ಪೊಲೀಸರು ಬಂಧಿಸಿದ್ದಾರೆ.