ವೀರಾಜಪೇಟೆ, ಜು. 3 : ರಂಗ ಭೂಮಿಯಲ್ಲಿ ದುಡಿದವರು ನಿರಂತರ ಸ್ಮರಣೀಯ, ಅವರ ಕಲೆಯನ್ನು ಮರೆಯದೆ ಗುರುತಿಸಿ ಕಲಾಪ್ರೇಮಿ ಗಳು ಗೌರವಿಸುವಂತಾಗಬೇಕು ಎಂದು ರಂಗ ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.ವೀರಾಜಪೇಟೆ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೊ: ಸಿ.ಜಿ.ಕೃಷ್ಣಸ್ವಾಮಿ ಅವರ ಬೀದಿ ರಂಗ ಭೂಮಿ ಅಕಾಡೆಮಿ ಆರ್ಟ್ ಫೌಂಡೇಶನ್ ಬೆಂಗಳೂರು, ರಂಗ ಭೂಮಿ ಪ್ರತಿಷ್ಠಾನ ಪೊನ್ನಂಪೇಟೆ, ಕಾವೇರಿ ಕಾಲೇಜು ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ‘’ಸಿಜಿಕೆ ರಂಗ ಪುರಸ್ಕಾರ’’ ಸಮಾರಂಭವನ್ನು ಉದ್ಘಾಟಿಸಿದ ಕಾರ್ಯಪ್ಪ ಅವರು ಅನೇಕ ಚಲನ ಚಿತ್ರಗಳಲ್ಲಿ ಅದ್ಭುತÀ ನಿರ್ದೇಶನ ಮಾಡಿ ಹೆಚ್ಚು ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಹ ಸಿ.ಜಿ.ಕೃಷ್ಣಸ್ವಾಮಿ ಅವರು ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು ಅವರನ್ನು ಸ್ಮರಿಸಲು ಪ್ರತಿ ವರ್ಷವು ಕೊಡಗು ಜಿಲ್ಲೆಯಲ್ಲಿ ಕಲಾವಿದರನ್ನು ಗುರುತಿಸಿ ರಂಗ ಪುರಸ್ಕಾರವನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಹಾಗೂ ರಂಗ ಭೂಮಿ ಪ್ರತಿಷ್ಠಾನದ ವತಿಯಿಂದ ಪೊನ್ನಂಪೇಟೆಯಲ್ಲಿ ರಂಗ ಮಂದಿರವನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಅಧ್ಯಕ್ಷ ಮಧೂಶ್ ಪೂವಯ್ಯ ಮಾತನಾಡಿ ರಂಗ ಭೂಮಿಯಲ್ಲಿ ಗುರುತಿಸಿಕೊಂಡ ವರನ್ನು ಸ್ಮರಿಸುವದು ನಮ್ಮ ಕರ್ತವ್ಯ ವಾಗಿದ್ದು ಸಮಾಜವನ್ನು ತಿದ್ದು ವಂತಹ ಕೆಲಸ ನಾಟಕಗಳಿಂದಲೂ ಸಾಧ್ಯ ಎಂದರು.

ಕಾವೇರಿ ಕಾಲೇಜಿನ ಪ್ರೊ. ಆನಂದ್ ಕಾರ್ಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗ ಭೂಮಿ ಕಲಾವಿದರಾದ ಅಲ್ಲ್ಲಾರಂಡ ವಿಠಲ್ ನಂಜಪ್ಪ ಮಾತನಾಡಿದರು.

ಸಮಾರಂಭದಲ್ಲಿ ಜಾನಪದ ರಂಗ ಭೂಮಿಯ ಬಲ್ಯ ಮೀದೇರಿರ ಸುಬ್ರಮಣಿ ಹಾಗೂ ಬಹುಮುಖ ಪ್ರತಿಭೆ ರಂಗ ಭೂಮಿ ಕಲಾವಿದ ಮದ್ರೀರ ಸಂಜು ಬೆಳ್ಯಪ್ಪ ಅವರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರೇವತಿ ಪೂವಯ್ಯ ಅವರು ಸಿ.ಜಿ.ಕೆ.ಅವರು ನಿರ್ದೇಶನ ಮಾಡಿದಂತಹ ಅನೇಕ ಚಲನ ಚಿತ್ರಗಳು ಹಾಗೂ ಅವರು ನಡೆದುಬಂದ ಹಾದಿಯ ಬಗ್ಗೆ ತಿಳಿಸಿದರು. ರಂಗ ಭೂಮಿ ಕಲಾವಿದರ ರಾಜ್ಯ ಸಮಿತಿ ಸದಸ್ಯೆ ಅನಿತಾ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಬಿ.ಎಂ.ಅರ್ಚನ ನಿರೂಪಿಸಿದರೆ ಎಂ.ಜಿ.ಗಗನ್ ವಂದಿಸಿದರು.