ಮಡಿಕೇರಿ, ಜು. 2: ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾಗಿ ನವೀನ್ ದೇರಳ ಪುನರಾಯ್ಕೆಯಾಗಿದ್ದು, ಕಾರ್ಯದರ್ಶಿ ಯಾಗಿ ಬಾಳಾಡಿ ದಿಲೀಪ್ ಕುಮಾರ್ ನೇಮಕಗೊಂಡಿದ್ದಾರೆ.

ಮಡಿಕೇರಿ ತಾಲೂಕು ಯುವ ಒಕ್ಕೂಟದ 22ನೇ ವಾರ್ಷಿಕ ಮಹಾಸಭೆ ಮಡಿಕೇರಿಯ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಗಾಳಿಬೀಡುವಿನ ಗಾಳಿಬೀಡು ಯುವಕ ಸಂಘದ ನವೀನ್ ದೇರಳ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ ಅರ್ವತ್ತೋಕ್ಲು ಪೆರಾತ ಯುವಕ ಸಂಘದ ಬಾಳಾಡಿ ದಿಲೀಪ್ ಕುಮಾರ್, ಉಪಾಧ್ಯಕ್ಷರುಗಳಾಗಿ ಮೇಕೇರಿ ಸ್ವಾಗತ ಯುವಕ ಸಂಘದ ಟಿ.ಎ. ಕುಮಾರ್, ಮಹಿಳಾ ಉಪಾಧ್ಯಕ್ಷರುಗಳಾಗಿ ಮಡಿಕೇರಿ ನೆಲ್ಲಕ್ಕಿ ಯುವತಿ ಮಂಡಳಿಯ ಕೇಕಡ ಇಂದುಮತಿ, ಸಹ ಕಾರ್ಯದರ್ಶಿಯಾಗಿ ತಾಳತ್ತಮನೆ ನೇತಾಜಿ ಯುವತಿ ಮಂಡಳಿಯ ನೇತ್ರಾವತಿ, ಖಜಾಂಚಿಯಾಗಿ ಬಲ್ಲಮಾವಟಿಯ ಭಗವತಿ ಯುವಕ ಸಂಘದ ಬಾಬಿ ಭೀಮಯ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಕಟ್ಟೆಮಾಡುವಿನ ಗ್ರೀನ್ಸ್ ಯುವಕ ಸಂಘದ ಬಿ.ಸಿ. ಧ್ರುವ, ಹೊದ್ದುಮಾನಿ ಭಗವತಿ ಯುವತಿ ಮಂಡಳಿಯ ಎಂ.ಟಿ. ಕೋಗಿಲೆ, ಅವಂದೂರು ಗೋಪಾಲಕೃಷ್ಣ ಯುವಕ ಸಂಘದ ಬಿ.ಪಿ. ಶರತ್ ಕುಮಾರ್, ಗಾಳಿಬೀಡು ಸ್ನೇಹಿತರ ಯುವಕ ಸಂಘದ ಕೆ.ಎ. ಮೋಹನ್, ತಾಳತ್ತಮನೆ ನೇತಾಜಿ ಯುವಕ ಸಂಘದ ಕೆ.ಕೆ. ಗಣೇಶ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸದಸ್ಯರುಗಳಾಗಿ ಬಿಳಿಗೇರಿ ಭಗವತಿ ಯುವಕ ಸಂಘದ ಮಂಡುವಂಡ ಜೋಯಪ್ಪ, ಹಾಕತ್ತೂರು ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಪಿ.ಪಿ. ಸುಕುಮಾರ್, ಹೊದ್ದೂರು ಶ್ರೀ ಪ್ರಸನ್ನ ಗಣಪತಿ ಯುವಕ ಸಂಘದ ಕೂಡಂಡ ಸಾಬ ಸುಬ್ರಮಣಿ, ನೀರುಕೊಲ್ಲಿ ಮಹಾತ್ಮ ಯುವಕ ಸಂಘದ ರಮೇಶ್ ಆಚಾರ್ಯ, ಕುಂಬಳದಾಳು ನವಚೇತನ ಯುವಕ ಸಂಘದ ನಿಖಿಲ್ ಬೆಳ್ಯಪ್ಪ ಆಯ್ಕೆಯಾಗಿದ್ದಾರೆ.

ನವೀನ್ ದೇರಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಟಿ.ಎ. ಕುಮಾರ್ ಸ್ವಾಗತಿಸಿ, ಇಂದುಮತಿ ಪ್ರಾರ್ಥಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಯಂ.ಬಿ. ಜೋಯಪ್ಪ ಹಾಗೂ ಸ್ಥಾಪಕಾಧ್ಯಕ್ಷ ಗಿರೀಶ್ ತಾಳತ್ತಮನೆ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ಸಂಘಟನಾ ಕಾರ್ಯದರ್ಶಿ ಕೆ.ಕೆ. ಗಣೇಶ್ ವಂದಿಸಿದರು.