ದುಬೈ, ಜು. 3: ಯು.ಎ.ಇ ಯಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನದ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುವ ರಕ್ತದಾನ ಶಿಬಿರವು ದುಬೈ ಲತೀಫಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮದಲ್ಲಿ ಅಜ್ಮಾನ್, ಶಾರ್ಜಾ, ದುಬೈ ಹಾಗೂ ಅಬುಧಾಬಿಯ ಕೊಡಗು-ದಕ್ಷಿಣ ಕನ್ನಡ ಗೌಡ ಸಮುದಾಯದ ಎಪ್ಪತ್ತಕ್ಕೂ ಹೆಚ್ಚಿನ ಜನರು ರಕ್ತದಾನ ಮಾಡಿದರು. ಹತ್ತಕ್ಕೂ ಹೆಚ್ಚಿನ ಜನರು ಪ್ಲೇಟ್ಲೆಟ್ಸ್ (ಕೆಂಪು ರಕ್ತ ಕಣ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಂಶ - ಕಿರುಬಿಲ್ಲೆಗಳು) ದಾನ ಮಾಡಿದರು.

ಕಾರ್ಯಕ್ರಮದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಸಂಸ್ಥೆ ಅರಬ್ ಸಂಯುಕ್ತ ಸಂಸ್ಥಾನದ ಸ್ಥಾಪಕಾಧ್ಯಕ್ಷ ಅಶೋಕ ಉಳುವಾರನ, ನಿಕಟಪೂರ್ವ ಅಧ್ಯಕ್ಷ ಗಣೇಶ ಅಚ್ಚಾಂಡಿರ, ಪ್ರಸಕ್ತ ಸಾಲಿನ ಅಧ್ಯಕ್ಷ ಹರೀಶ್ ಕೋಡಿ, ಉಪಾಧ್ಯಕ್ಷ ಸುನಿಲ್ ಮೊಟ್ಟೆಮನೆ, ಪ್ರಧಾನಕಾರ್ಯದರ್ಶಿ ಕರ್ಣಯ್ಯನ ಸುನಿಲ್ ಕುಮಾರ್, ಖಜಾಂಚಿ ದಿಲೀಪ್ ಉಳುವಾರು ಉಪಸ್ಥಿತರಿದ್ದರು. ಅತಿಥಿಗಳಾಗಿ ಒಕ್ಕಲಿಗರ ಸಂಘದ ನವೀನ್ ಗೌಡ, ರೀವಾ ಲೇಸರ್ ಬ್ಯೂಟಿ ಮತ್ತು ಸ್ಪಾ ದುಬೈಯ ಡಾ|| ನಂದ ಕಿಶೋರ್, ಡಾ|| ರಶ್ಮಿ ನಂದ ಕಿಶೋರ್ ಹಾಗೂ ಅಬುಧಾಬಿಯ ಮೆಡಿಕ್ಲಿನಿಕ್ ಆಸ್ಪತ್ರೆಯ ಡಾ|| ತ್ರಿಲೋಕ್ ಚಂದ್ರಶೇಖರ್ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ರಾಹುಲ್ ಬಿದ್ದಪ್ಪ ಕರ್ಣಯ್ಯನ, ಆಶಿಷ್ ಕೋಡಿ, ಆಯುಷ್ ಕೋಡಿ, ಮೀನ ಹರೀಶ್ ಕೋಡಿ ಹಾಗೂ ಜಗದೀಶ್ ಕುಶಾಲಪ್ಪ ಸಬ್ಬಾಂಡ್ರ ಇದ್ದರು. ರಕ್ತದಾನ ಶಿಬಿರಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಬೆಳಗಿನ ಉಪಾಹಾರ, ಚಹಾ, ಕಾಫಿ, ಹಣ್ಣು ಹಂಪಲು ಹಾಗೂ ಕಾರ್ಯಕ್ರಮದ ಕೊನೆಯವರೆಗೂ ತಂಪು ಪಾನೀಯದ ವ್ಯವಸ್ಥೆಗೆ ಕುಸುವi Áಧರ ಕೋಡಿ, ಅಶೋಕ್ ಉಳುವಾರನ, ಚಂದ್ರಕಾಂತ್ ಕುದ್ಪಾಜೆ, ಸುರೇಶ್ ಕುಂಪಲ, ಸುಬ್ರಮಣಿ ಕದಿಕಡ್ಕ, ಯತೀಶ್ ಗೌಡ, ದಿಲೀಪ್ ಉಲುವಾರು, ಸಮರ್ಥ್ ಬಂಟ್ವಾಳ ಹಾಗೂ ವಿನೋದ ರಾಮಚಂದ್ರ ಅವರು ಪ್ರ್ರಾಯೋಜಕರಾಗಿದ್ದರು.