ನಾಪೆÇೀಕ್ಲು. ಜು. 2: ಕೊಡಗಿನ ಕೂರ್ಗ್ ಬೈರೇಸ್ ಮತ್ತು ಜಮ್ಮಾ ಹಿಡುವಳಿದಾರರಿಗೆ ಬಂದೂಕು ವಿನಾಯಿತಿ ಪತ್ರವನ್ನು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ನೀಡಲಾಗುವದು ಎಂದು ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ 30 ದಿನಗಳಲ್ಲಿ ಬಂದೂಕು ವಿನಾಯಿತಿ ಪತ್ರ ದೊರೆಯದಿದ್ದಲ್ಲಿ ಸೇವ್ ಕೊಡಗು ಫೋರಂ ಅನ್ನು ಸಂಪರ್ಕಿಸುವಂತೆ ಪೆÇೀರಂನ ಬಿದ್ದಾಟಂಡ ಟಿ.ದಿನೇಶ್ ತಿಳಿಸಿದ್ದಾರೆ. ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಂದೂಕು ವಿನಾಯಿತಿ ಪತ್ರ ದೊರಕದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಫೋರಂ ವತಿಯಿಂದ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆಯಲಾಯಿತು. ಜಿಲ್ಲಾಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಶಿರಸ್ತೆದಾರ್ ಪ್ರವೀಣ್ ಜೊತೆ ಚರ್ಚಿಸಿ ಅರ್ಹರಿಗೆ 30 ದಿನಗಳೊಳಗೆ ಬಂದೂಕು ವಿನಾಯಿತಿ ಪತ್ರ ನೀಡುವ ಭರವಸೆ ನೀಡಿದ್ದಾರೆ ಎಂದರು.

ಭ್ರಷ್ಟಾಚಾರ ಮತ್ತು ಲಂಚ ಕಳ್ಳತನದ ಒಂದು ಭಾಗ. ಸರಕಾರಿ ನೌಕರರು ಸರಕಾರದ ಸಂಬಳದೊಂದಿಗೆ ಲಂಚ ಪಡೆಯುವದು, ಕಾಮಗಾರಿಯ ಕಮಿಶನ್ ಪಡೆಯುವದು ಕೂಡ ಹಗಲು ದರೋಡೆಯಾಗಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದರು.

ಗೋಷ್ಠಿಯಲ್ಲಿ ಬಿದ್ದಾಟಂಡ ಜಿನ್ನು ನಾಣಯ್ಯ, ಕೀಪಾಡಂಡ ಮಧು ಬೋಪಣ್ಣ, ಎ&divound;.ïಎಸ್. ಉದಯಶಂಕರ್, ಕುಂಡ್ಯೋಳಂಡ ಕಾಶಿ ತಮ್ಮಯ್ಯ, ನೆಡುಮಂಡ ಕೃತಿ. ಕೇಟೋಳಿರ ರೆಮ್ಮಿ, ಕುಶಾಲಪ್ಪ ಇದ್ದರು.