ಮಡಿಕೇರಿ, ಜು. 3: ಭರ್ಜರಿ ಯಶಸ್ಸು ಗಳಿಸಿದ್ದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಪ್ರೇಕ್ಷಕರಲ್ಲಿ ಮೋಡಿ ಮಾಡಿದ್ದ ನಾಯಕ ರಕ್ಷಿತ್ ಶೆಟ್ಟಿ ಹಾಗೂ ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಅವರುಗಳು ನಿಜ ಜೀವನದಲ್ಲಿ ಜೋಡಿಯಾಗುವ ನಿಟ್ಟಿನಲ್ಲಿ ಇಂದು ಇಬ್ಬರ ವಿವಾಹ ನಿಶ್ಚಿತಾರ್ಥ ನೆರವೇರಿತು. ವೀರಾಜಪೇಟೆಯ ಸೆರಿನಿಟಿ ಹಾಲ್‍ನ ಮಾಲೀಕರಾಗಿರುವ ಮುಂಡಚಾಡಿರ ಮಂದಣ್ಣ ಅವರ ಪುತ್ರಿಯಾಗಿರುವ ರಶ್ಮಿಕಾಳ ನಿಶ್ಚಿತಾರ್ಥ ಸೆರಿನಿಟಿ ಹಾಲ್‍ನಲ್ಲಿ ಬಂಧು ಬಾಂಧವರು, ಸಿನಿಮಾ ನಟ- ನಟಿಯರ ಸಮ್ಮುಖದಲ್ಲಿ ನೆರವೇರಿತು.