ಮಡಿಕೇರಿ, ಜು.4 : ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘÀದಲ್ಲಿ ನಡೆದಿರುವ ಭಾರೀ ಪ್ರಮಾಣದ ಕರಿಮೆಣಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದರೂ ಯಾವದೇ ಕ್ರಮ ಕೈಗೊಳ್ಳದಿರುವದನ್ನು ಖಂಡಿಸಿ ತಾ. 7 ರಂದು ನಗರದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಲು ಕಾವೇರಿಸೇನೆ ನಿರ್ಧರಿಸಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೋಲತಂಡ ರಘು ಮಾಚಯ್ಯ ತಿಳಿಸಿದ್ದಾರೆ.ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘÀದ ಕೆಲವು ಸದಸ್ಯರುಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ನಾಲ್ಕು ತಿಂಗಳ ಹಿಂದೆ ಸಹಕಾರ ಸಂಘದ ಗೋದಾಮಿನಲ್ಲಿರಿಸಿದ್ದ ಕರಿಮೆಣಸಿನ ದಾಸ್ತಾನಿನÀ ಪೈಕಿ 100 ಚೀಲ ಕರಿಮೆಣಸು ದುರುಪಯೋಗವಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಕಳೆದ ಏ.3 ರಂದು ಸಹಕಾರ ಸಂಘಗಳ ಉಪನಿಬಂಧಕರಿಗೆ ಲಿಖಿತ ದೂರು ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಒಂದು ತಿಂಗಳ ಒಳಗಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಮೂರು ತಿಂಗಳು ಕಳೆzರೂ ಈ ಬಗ್ಗೆ ಯಾವದೇ ತನಿಖೆ ನಡೆದಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಕರಿಮೆಣಸಿನ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳದೆ ಜಾಣ ಮೌನ ಪ್ರದರ್ಶಿಸುತ್ತಿರುವ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಧೋರಣೆ ಗಮನಿಸಿದಾಗ, ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ರಘು ಮಾಚಯ್ಯ ಆರೋಪಿಸಿದರು. ಪ್ರಕರಣದ ತನಿಖೆಗೆ ಆಗ್ರಹಿಸಿ ನಡೆಸುವ ಮುಷ್ಕರಕ್ಕೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ವಿರುದ್ಧವೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವದಾಗಿ ಎಚ್ಚರಿಕೆ ನೀಡಿದರು.

ಕೆÉೀವಲ ಮಾಲ್ದಾರೆ ಮಾತ್ರವಲ್ಲದೆ ಜಿಲ್ಲೆಯ ವಿವಿಧ ಸಹಕಾರ ಸಂಘಗಳಲ್ಲಿ ದುರುಪಯೋಗವಾಗುತ್ತಿದ್ದರೂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಕೆÉೀವಲ ಸದಸ್ಯರು ಬೆಳೆದ ಕರಿಮೆಣಸು ಮಾತ್ರವಲ್ಲದೆ ವರ್ತಕರು ನೀಡುವ ಕರಿಮೆಣಸನ್ನು ದಾಸ್ತಾನಿಟ್ಟು ಕೊಳ್ಳುವದು ನಿಯಮ ಬಾಹಿರ ಕ್ರಮವಾಗಿದೆ ಎಂದು ರಘುಮಾಚಯ್ಯ ಟೀಕಿಸಿದರು.

ಸಹಕಾರ ಸಂಘದ ಸದಸ್ಯರು ಹಾಗೂ ಮಾಲ್ದಾರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವಿಜು ಬಿದ್ದಪ್ಪ ಮಾತನಾಡಿ, ಸಂಘÀದ ಗೋದಾಮಿನಲ್ಲಿದ್ದ ಕರಿಮೆಣಸಿನ ದುರುಪಯೋಗ ಬಯಲಿಗೆ ಬರುವದಕ್ಕೆ ಕೆಲವು ದಿನಗಳ ಹಿಂದೆ ಆಡಳಿತ ಮಂಡಳಿ ಸದಸ್ಯರು ಗೋದಾಮಿನ ದಾಸ್ತಾನನ್ನು ಪರಿಶೀಲಿಸಿದ್ದಾರೆ. ಎಲ್ಲವೂ ಸಮರ್ಪಕವಾಗಿದೆ ಎಂದು ತಮ್ಮ ಸಹಿಯೊಂದಿಗೆ ಸಂಘಕ್ಕೆ ಪತ್ರವನ್ನು ನೀಡಿದ್ದಾರೆ. ಆದರೆ ಪರಿಶೀಲನೆಯ ಕೆಲವೇ ದಿನಗಳಲ್ಲಿ ನೂರು ಚೀಲ ಕರಿಮೆಣಸು ನಾಪತ್ತೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.

ಕರಿಮೆಣಸು ದುರುಪಯೋಗ ಪ್ರಕರಣದ ಬಳಿಕ ಆಡಳಿತ ಮಂಡಳಿ ಪೊಲೀಸರಿಗೆ ಗೋದಾಮಿನ ಸಿಬ್ಬಂದಿಯೊಬ್ಬರ ವಿರುದ್ಧ ದೂರು ಸಲ್ಲಿಸಿತ್ತು. ಆದರೆ ಇಲ್ಲಿಯವರೆಗೆ ಆತನ ಬಂಧನವಾಗಿಲ್ಲ, ಬದಲಾಗಿ ದುರುಪಯೋಗಕ್ಕೆ ಸಂಬಂಧಿಸಿದಂತೆ ಆತನ ಸಂಬಂಧಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘದ ಸದಸ್ಯರಾದ ವಿ.ಕೆ. ಗಣಪತಿ, ಎಂಎಸ್. ಗಣೇಶ್, ರಾಘವ ಹಾಗೂ ಫ್ರಾನ್ಸಿಸ್ ಉಪಸ್ಥಿತರಿದ್ದರು.