ಮಡಿಕೇರಿ, ಜು. 4: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಮಹಿಳಾ ಘಟಕದ ವಿವಿಧ ವಲಯಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಹುದಿಕೇರಿ ವಲಯಾಧ್ಯಕ್ಷರಾಗಿ ತೀತಿರ ಮೇರಿ ಪೂಣಚ್ಚ, ಹಾತೂರು ವಲಯಾಧ್ಯಕ್ಷರಾಗಿ ಥೆರೇಸ ವಿಕ್ಟರ್, ಗೋಣಿಕೊಪ್ಪಲು ವಲಯಾಧ್ಯಕ್ಷರಾಗಿ ಕೊಂಗಾಂಡ ಮಮತಾ ಮನೋಜ್ ಹಾಗೂ ಟಿ. ಶೆಟ್ಟಿಗೇರಿ ವಲಯಾಧ್ಯಕ್ಷರಾಗಿ ಉಳುವಂಗಡ ಸಬಿತಾ ಪೂವಯ್ಯ ಆಯ್ಕೆಯಾಗಿದ್ದಾರೆ.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ತೀತಿರ ಧರ್ಮಜ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಹಾಗೂ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕಡೇಮಾಡ ಕುಸುಮಾ ನೇಮಕಾತಿ ಆದೇಶ ನೀಡಿದರು.

ಈ ಸಂದರ್ಭ ಹಿರಿಯ ಕಾಂಗ್ರೆಸ್ ಮುಖಂಡ ಚಕ್ಕೇರ ವಾಸು ಕುಟ್ಟಪ್ಪ, ಹಿಂದುಳಿದ ವರ್ಗ ಘಟಕದ ಜಿಲ್ಲಾಧ್ಯಕ್ಷ ಸರ ಚಂಗಪ್ಪ, ಪಂಚಾಯಿತಿ ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ಹಾಗೂ ಇನ್ನಿತರರು ಹಾಜರಿದ್ದರು.