ಮಡಿಕೇರಿ, ಜು : 4 ಸಮಾಜಮುಖಿ ಕೆಲಸದ ಮೂಲಕ ಸಮಾಜಕ್ಕಾಗಿ ಬಾಳುವ ನಿಶ್ಚಯದೊಂದಿಗೆ ಭಾರತವನ್ನು ಜಗದ್ಗುರು ಮಾಡುವ ಸಂಕಲ್ಪ ತೊಡೋಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಜಯ ಪ್ರಕಾಶ್ ಕರೆ ನೀಡಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಡಿಕೇರಿ ನಗರ ಶಾಖೆ ವತಿಯಿಂದ ಕ್ರಿಸ್ಟಲ್ ಹಾಲ್‍ನಲ್ಲಿ ನಡೆದ ಶ್ರೀಗುರು ಪೂe Áಉತ್ಸವದಲ್ಲಿ ಬೌದ್ಧಿಕ್ ನೀಡಿದರು.

ಕಳೆದ 92 ವರ್ಷಗಳಿಂದ ಸಂಘ ನಿರಂತರವಾಗಿ ಸಮಾಜಕ್ಕಾಗಿ ಸಮರ್ಪಣೆ, ಸಮಯ ನೀಡುವ ಭಾವನೆಯನ್ನು ಸ್ವಯಂಸೇವಕರಲ್ಲಿ ಮೂಡಿಸುತ್ತಿದೆ. ಹಿಂದೊಮ್ಮೆ ಜಗದ್ಗುರು ಆಗಿದ್ದ ಭಾರತ ಕ್ರಮೇಣ ಆ ಸ್ಥಾನ ಕಳೆದುಕೊಂಡಿದೆ ಎಂದು ವಿಷಾದಿಸಿದ ಅವರು, ಆ ಸ್ಥಾನವನ್ನು ಮತ್ತೊಮ್ಮೆ ತಂದುಕೊಡ ಬೇಕಾಗಿದೆ. ಭಾರತ ದೇಶ ಕಲ್ಲು ಮಣ್ಣಿನ ರಾಶಿಯಲ್ಲ, ಹಲವು ಭಾಷೆಗಳ, ಹಲವು ಸಂಸ್ಕೃತಿಗಳತವರಾಗಿದೆ. ಮಾತೆಯ ಸ್ಥಾನದಲ್ಲಿ ದೇಶವನ್ನು ಪೂಜಿಸಲಾಗುತ್ತಿದೆ. ಹಿಂದೂ ಸಮಾಜದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ವ್ಯಕ್ತಿಯನ್ನು ಯೋಗ್ಯನನ್ನಾಗಿ ಮಾಡುವ ಕರ್ತವ್ಯವನ್ನು ಗುರುಗಳು ಮಾಡುತ್ತಾರೆ. ಪ್ರತಿಯೊಬ್ಬರಿಗೂ ಗುರಿ ಅವಶ್ಯಕ. ಗುರಿ ಬರಬೇಕಾದರೆ ಗುರುವಿನ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಭಾರತೀಯ ಸೇನೆಗೂ ಯಾವದೇ ವ್ಯತ್ಯಾಸವಿಲ್ಲ. ಎರಡೂ ಶಿಸ್ತಿಗೆ ಹೆಸರಾದ ಸಂಸ್ಥೆಯಾಗಿದೆ. ಹಿಂದೂ ಸಮಾಜದಲ್ಲಿ ಶಿಸ್ತು, ಬದ್ಧತೆ ಇದೆ. ಸಮಾಜ ನಮಗೇನು ಕೊಟ್ಟಿದೆ ಅನ್ನುವ ಬದಲು ಸಮಾಜಕ್ಕಾಗಿ ನಾವೇನು ಕೊಟ್ಟಿದ್ದೇವೆ ಅನ್ನುವದು ಮುಖ್ಯವೆಂದು ಹೇಳಿದರು.ವೇದಿಕೆಯಲ್ಲಿ ಜಿಲ್ಲಾ ಸಂಘ ಚಕ್ಕೇರ ಮನು ಕಾವೇರಪ್ಪ ಇದ್ದರು. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಜಿಲ್ಲಾಧ್ಯಕ್ಷ ಡಾ.ನವೀನ್‍ಮಾರ್, ಹಿರಿಯ ಸ್ವಯಂಸೇವಕ ಡಾ. ಪಾಟ್ಕರ್, ಕೆ.ಎಸ್.ದೇವಯ್ಯ, ಸ್ವಯಂಸೇವಕರು ಧ್ವಜ ಪೂಜೆ ಮಾಡಿದರು. ವಕೀಲ ಕೃಷ್ಣಮೂರ್ತಿ ಪ್ರಾರ್ಥಿಸಿ, ನಗರ ಕಾರ್ಯವಾಹ ಪವನ್ ಸ್ವಾಗತಿಸಿದರೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶಿವಾಜಿ ವಂದಿಸಿದರು.