ವೀರಾಜಪೇಟೆ, ಜು. 4: ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಸಂತ್ರಸ್ತರ ಪರಿಹಾರ ಯೋಜನೆಯ ಸಂತ್ರಸ್ತರಿಗೆ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು, ಯಾವದೇ ಘಟನೆಗಳು ನಡೆದಲ್ಲಿ ಮೊದಲು ಪೊಲೀಸ್ ಠಾಣೆಗೆ ದೂರು ನೀಡಬೇಕು. ನಂತರ 24 ಗಂಟೆಯೊಳಗೆ ಪೊಲೀಸರು ಅಗತ್ಯವಿದ್ದಲ್ಲಿ ಎಫ್.ಐ.ಆರ್. ದಾಖಲಿಸಿ ವರದಿ ಸಲ್ಲಿಸಬೇಕು. ಪ್ರಕರಣದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ಯಾರು ಸಂತ್ರಸ್ತರಿದ್ದಾರೆ ಅಂತಹವರಿಗೆ ಪರಿಹಾರ ದೊರಕಿಸಲಾಗುವದು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶÀ ಡಿ.ಆರ್. ಜಯಪ್ರಕಾಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಿವಿಲ್ ನ್ಯಾಯಾಧೀಶೆ ಕೆ. ಶರ್ಮಿಳಾ ಕಾಮತ್ ಉಪಸ್ಥಿತರಿದ್ದರು.

ವಕೀಲ ಎಂ.ಎಂ. ನಂಜಪ್ಪ ಅವರು ‘ಸಂತ್ರಸ್ತರ ಪರಿಹಾರ ಯೋಜನೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ನ್ಯಾಯಾಲಯದ ಸಿಬ್ಬಂದಿ ಎಲ್. ಗೀತಾ ಸ್ವಾಗತಿಸಿದರು. ಮಾಲಾಶ್ರೀ ಮತ್ತು ಶೀಲಾ ನಿರೂಪಿಸಿದರೆ, ಬೇಬಿ ವಂದಿಸಿದರು.