ಮಡಿಕೇರಿ, ಜು. 5: ಆಧಾರ್ ಅಪ್ಡೇಟ್ ಕೇಂದ್ರವನ್ನು ತಾ. 5 ರಿಂದ ಪ್ರಧಾನ ಅಂಚೆ ಕಚೇರಿ, ಮಡಿಕೇರಿಯಲ್ಲಿ ಲಾರಂಭಿಸಲಾಗಿದ್ದು, ಹೆಸರು, ವಿಳಾಸ, ಹುಟ್ಟಿದ ದಿನಾಂಕ/ ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಈ-ಮೇಲ್ ವಿಳಾಸ ಮಾಹಿತಿಗಳನ್ನು ಸೂಕ್ತ ದಾಖಲಾತಿ ಸಲ್ಲಿಸುವದರೊಂದಿಗೆ ಸಾರ್ವಜನಿಕರು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಡಿಕೇರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.