ನಾಪೆÉÇೀಕ್ಲು, ಜು. 6: ನಾಪೆÉÇೀಕ್ಲು ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿರುವ ಹಿನೆÀ್ನಲೆಯಲ್ಲಿ ತಾ. 17ರಂದು ಪಕ್ಷಾತೀತವಾಗಿ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಹಳೇ ತಾಲೂಕು ಶ್ರೀ ಭಗವತಿ ಕಲ್ಯಾಣ ಮಂಟಪದಲ್ಲಿ ನಡೆದ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಕುಂಡ್ಯೋಳಂಡ ಮೇದಪ್ಪ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ 21 ಗ್ರಾಮ ಪಂಚಾಯಿತಿ ಸದಸ್ಯರು, ಕೆಲವು ಇಲಾಖಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬೆರಳೆಣಿಕೆಯ ಗ್ರಾಮಸ್ಥರು ಮಾತ್ರ ಉಪಸ್ಥಿತರಿದ್ದರು. ಈ ಹಿನೆÀ್ನಲೆಯಲ್ಲಿ ಅಧ್ಯಕ್ಷರು ಸಭೆಯನ್ನು ಅರ್ಧ ಗಂಟೆಗಳ ಕಾಲ ಮುಂದೂಡಿದರು.

ನಂತರ ಆರಂಭವಾದ ಸಭೆಯಲ್ಲಿ ನಾಲ್ಕುನಾಡು ವ್ಯಾಪ್ತಿಯ ಸುಮಾರು 27 ಗ್ರಾಮಗಳಿಗೆ ಒಳಪಟ್ಟ ನಾಪೆÇೀಕ್ಲು ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರೆತೆಯಿರುವ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗದ ಜಿಲ್ಲಾಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ನೇತೃತ್ವದಲ್ಲಿ ತಾ. 17ರಂದು ಸಮುದಾಯ ಆರೋಗ್ಯ ಕೇಂದ್ರದ ಎದುರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ನೂರಾರು ವರ್ಷಗಳ ಕಾಲ ಬಾಳಿಕೆ ಬರುವ ಕಾಫಿ ಬೆಳೆಯನ್ನು ಪ್ರತಿ ವರ್ಷ ಆರ್.ಟಿ.ಸಿ ಬೆಳೆ ಕಾಲಂ ನಲ್ಲಿ ನಮೂದಿಸಬೇಕಾಗಿರುವದು ಸರಿಯಲ್ಲ ಕಾಫಿ ಬೆಳೆಯನ್ನು ಶಾಶ್ವತವಾಗಿ ಆರ್.ಟಿ.ಸಿ ಯಲ್ಲಿ ನಮೂದಿಸಬೇಕೆಂದು ಎನ್.ಎಸ್. ಉದಯಶಂಕರ್ ಒತ್ತಾಯಿಸಿದರು.

ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಾದ ಕುಂಡ್ಯೊಳಂಡ ರಮೇಶ್ ಮುದ್ದಯ್ಯ, ಮೇದಪ್ಪ, ಪುಲ್ಲೇರ ಅರುಣ, ಕುಲ್ಲೇಟಿರ ಅರುಣ್ ಬೇಬಾ, ಅರೆಯಡ ಅಶೋಕ, ಬಿ.ಎಂ.ಪ್ರದೀಪ್, ರಾಧಾಕೃಷ್ಣ ಮತ್ತಿತರರು ಸಭೆಯ ಗಮನ ಸೆಳೆದರು.

ಕೃಷಿ ಇಲಾಖೆಯ ಆಧಿಕಾರಿ ಜಯರಾಮ್ ಮಾತನಾಡಿ ಕಾರ್ಮಿಕ ಕೃಷಿ ಕೆಲಸದಲ್ಲಿ ತೊಡಗಿಕೊಂಡ ಸಂದರ್ಭ ಮರದಿಂದ ಬಿದ್ದು ಅಥವಾ ಹಾವು ಕಡಿತದಿಂದ ಮರಣ ಹೊಂದಿದರೆ ಅಂತಹ ಕುಟುಂಬಕ್ಕೆ ಕೃಷಿ ಇಲಾಖೆಯಿಂದ ಒಂದು ಲಕ್ಷ ರೂ. ಪರಿಹಾರ ನೀಡಲಾಗುವದು. ಸಾಲ ಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ ಅಂತಹ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ.ಗಳ ಪರಿಹಾರವನ್ನು ಸರಕಾರ ನೀಡಲಿದೆ. ಅದರಂತೆ ಇಲಾಖೆಯಲ್ಲಿ ಬೆಳೆಗಾರರಿಗೆ ಕೀಟನಾಶಕ ಮತ್ತಿತರ ಔಷಧಿಗಳನ್ನು ಶೇ 50 ಸಹಾಯ ಧನದಲ್ಲಿ ನೀಡಲಾಗುವದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ದಮಯಂತಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯೆಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಗ್ರಾ.ಪಂ. ಉಪಾಧ್ಯಕ್ಷ ತಿಮ್ಮಯ್ಯ, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಆರ್. ಕೇಶವ್, ಸಿಬ್ಬಂದಿ ಇದ್ದರು.