ಸಿದ್ದಾಪುರ, ಜು. 6: ನೆಲ್ಯಹುದಿಕೇರಿ ಗ್ರಾ.ಪಂ. ಸದಸ್ಯರೊಬ್ಬರು ವಾಣಿಜ್ಯ ವಾಹನ ಚಾಲಕರÀ ಸಂಘದ ಅಧ್ಯಕ್ಷ ಅಬ್ದುಲ್ ರೆÀಹಮಾನ್ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸಂಘ ತೀವ್ರವಾಗಿ ಖಂಡಿಸಿದೆ.
ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ನಾಲ್ಕನೇ ವಾರ್ಡಿನ ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಅಬ್ದುಲ್ ರೆಹಮಾನ್ ಸಂಬಂಧಪಟ್ಟವರ ಗಮನಕ್ಕೆ ತಂದಿರುವದನ್ನು ಸಹಿಸದೆÀ ಈ ವಾರ್ಡ್ ಸದಸ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ವಾಣಿಜ್ಯ ವಾಹನ ಚಾಲಕರ ಸಂಘದ ಜಿಲ್ಲಾ ಸಮಿತಿ ಸದಸ್ಯ ಅನಿಲ್ ಕುಟ್ಟಪ್ಪ ಆರೋಪಿಸಿದರು. ಗ್ರಾಮದ ಅಭಿವೃದ್ದಿ ಬಗ್ಗೆ ಕಾಳಜಿ ಹೊಂದಿರುವವರ ಮೇಲೆ ಹಲ್ಲೆಗೆ ಮುಂದಾದ ಸದಸ್ಯ ಪಂಚಾಯತ್ ರಾಜ್ ನಿಯಮದ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿರುವದು ಒಳಿತು ಎಂದರು. ಕೂಡಲೇ ಗ್ರಾ.ಪಂ. ಸದಸ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ವಾಣಿಜ್ಯ ವಾಹನ ಚಾಲಕರ ಕಾರ್ಯಕಾರಿಣಿ ಸದಸ್ಯ ಮಂಜು, ಸಯ್ಯದ್ ಮತ್ತು ಅನಿಲ್ ಇದ್ದರು.