ಮಡಿಕೇರಿ, ಜು. 5: ವೀರಾಜಪೇಟೆ ತಾಲೂಕು ಕಂಡಗಾಲ ಗ್ರಾಮದ ಬಳಿ ಮರಳು ಫಿಲ್ಟರ್ ಮಾಡಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಹಿರಿಯ ಭೂ ವಿಜ್ಞಾನಿಯರಾದ ಬಿ.ರೇಷ್ಮಾ ಮತ್ತು ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ ಅವರೊಂದಿಗೆ ಭೇಟಿ ನೀಡಲು ತೆರಳುವಾಗ ಬಿ.ಶೆಟ್ಟಿಗೇರಿ ಮತ್ತು ಬಿಟ್ಟಂಗಾಲ ರಸ್ತೆಯಲ್ಲಿ ಬಂದಂತಹ (ಕೆಎ-12-ಎ-8301) ಈಚರ್ ವಾಹನವನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಮರಳು ತುಂಬಿರುವದು ಕಂಡುಬಂದಿದ್ದು,

ವಾಹನವನ್ನು ವಶಪಡಿಸಿಕೊಂಡು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಏಒಒಅಖ-1994 42-43 ಮತ್ತು 44, ಒಒ(ಖಆ) ಂಛಿಣ 1957 4(1) 4(1)(ಂ) &amdiv; 21 ರಂತೆ ಹಾಗೂ IPಅ ಸೆಕ್ಷನ್ 379 ರಂತೆ ಮೊಕದ್ದಮೆಯನ್ನು ವಾಹನದ ಚಾಲಕ ಮಾಲೀಕರ ಹಾಗೂ ವಾಹನದ ವಿರುದ್ಧ ದಾಖಲಿಸಲಾಗಿರುತ್ತಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಬಿ.ರೇಷ್ಮಾ ಅವರು ತಿಳಿಸಿದ್ದಾರೆ.