ಶನಿವಾರಸಂತೆ, ಜು. 6 : ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಪಾಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಗುರುವಾರ ಬೆಳಗ್ಗಿನ ಜಾವ ಟಿಪ್ಪರ್ ವಾಹನ (ಕೆಎ. -12ಬಿ-3970) ಮರಳನ್ನು ಅಕ್ರಮವಾಗಿ ಕಳವು ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.
ಶನಿವಾರಸಂತೆ ಠಾಣಾ ಸರಹದ್ದಿನಲ್ಲಿ ಪೊಲೀಸರು ಕರ್ತವ್ಯದಲ್ಲಿರುವಾಗ ದೊರೆತ ಖಚಿತ ಮಾಹಿತಿ ಮೇರೆ ಹಂಪಾಪುರ ಗ್ರಾಮದ ಮಲ್ಲಪ್ಪ ಎಂಬವರು ಟಿಪ್ಪರ್ ವಾಹನದಲ್ಲಿ ಮರಳು ತುಂಬಿಸಿಕೊಂಡು ಅಕ್ರಮ ಸಾಗಾಟ ಮಾಡಲು ಯತ್ನಿಸಿದಾಗ ಪೊಲೀಸರನ್ನು ನೋಡಿ ಓಡಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಮರಳು ಸಹಿತ ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು ವಿಧಿ 379ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್. ಎಂ. ಮರಿಸ್ವಾಮಿ ಸಿಬ್ಬಂದಿಗಳಾದ ಹರೀಶ್, ಪ್ರದೀಪ್, ಪರಮೇಶ್, ವಿವೇಕ್ ಪಾಲ್ಗೊಂಡಿದ್ದರು.