ಮಡಿಕೇರಿ, ಜು. 6: ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗದಿಂದ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಕಂಬೀರಂಡ ರಾಖಿ ಪೂವಣ್ಣ ನೇತೃತ್ವದಲ್ಲಿ ಇತ್ತೀಚೆಗೆ ಕಾಕೋಟುಪರಂಬುವಿನ ಮುಲ್ಲೇರÀ ಮಧು ಸುಬ್ರಮಣಿಯವರ ಗದ್ದೆಯಲ್ಲಿ ನಡೆಸಲಾದ ಪದವಿ ಕಾಲೇಜು ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸ್ಪರ್ಧಾಳುಗಳು ಉತ್ಸಾಹದಿಂದ ಪಾಲ್ಗೊಂಡರು.
ಸುಮಾರು 6 ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಮಹಿಳೆಯರ ಕೆಸರು ಗದ್ದೆ 100 ಮೀ. ಓಟದಲ್ಲಿ ಪ್ರಥಮ ಬಹುಮಾನವನ್ನು ಕಾವೇರಿ ಕಾಲೇಜು ವೀರಾಜಪೇಟೆಯ ಲಸಿಕ, ದ್ವಿತೀಯ ಬಹುಮಾನವನ್ನು ಪೊನ್ನಂಪೇಟೆಯ ಸಾಯಿಶಂಕರ್ ಪದವಿ ಕಾಲೇಜಿನ ರೂಪಿತ ಪಡೆದುಕೊಂಡರು.
ಪುರುಷರ ವಿಭಾಗದಲ್ಲಿ ಕೆಸರು ಗದ್ದೆ 100 ಮೀ. ಪ್ರಥಮ ಬಹುಮಾನ ಮೂರ್ನಾಡು ಪದವಿ ಕಾಲೇಜಿನ ಶಫೀಕ್, ದ್ವಿತೀಯ ಬಹುಮಾನ ಅಬ್ದುಲ್ ಬಶೀರ್ ಇವರು ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ಕೆಸರು ಗದ್ದೆ 200 ಮೀ. ಪ್ರಥಮ ಬಹುಮಾನ ಮೂರ್ನಾಡು ಪದವಿ ಕಾಲೇಜಿನ ಶಫೀಕ್, ಅದೇ ಕಾಲೇಜಿನ ಚಿಣ್ಣಪ್ಪ ದ್ವಿತೀಯ ಬಹುಮಾನ ಪಡೆದುಕೊಂಡರು. ಮಹಿಳೆಯರ ಕೆಸರು ಗದ್ದೆ 200 ಮೀ. ಓಟದಲ್ಲಿ ಪ್ರಥಮ ಬಹುಮಾನ ಬೋಜಮ್ಮ, ಪೊನ್ನಂಪೇಟೆಯ ಸಾಯಿಶಂಕರ್ ಪದವಿ ಕಾಲೇಜು, ದ್ವಿತೀಯ ಬಹುಮಾನ ಅದೇ ಕಾಲೇಜಿನ ರೂಪಿತ ಪಡೆದುಕೊಂಡರು.
ಹಗ್ಗಜಗ್ಗಾಟದಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಕಾವೇರಿ ಕಾಲೇಜು ವೀರಾಜಪೇಟೆ ವಿದ್ಯಾರ್ಥಿಗಳು ಪ್ರಥಮ, ಪೊನ್ನಂಪೇಟೆಯ ಸಾಯಿಶಂಕರ್ ಪದವಿ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.
ಸ್ಪರ್ಧೆಯಲ್ಲಿನ ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲೆ ಡಾ. ಡಿ.ಕೆ. ಸರಸ್ವತಿ, ಮುಲ್ಲೇರ ಮಧು ಸುಬ್ರಮಣಿ, ಡಾ. ಟಿ.ಕೆ. ಬೋಪಯ್ಯ ವಿತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಕಂಬೀರಂಡ ರಾಖಿ ಪೂವಣ್ಣ ನಿರೂಪಿಸಿದರು.
ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಬಸವರಾಜು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ. ಸಿದ್ದಪ್ಪಾಜಿ, ಪ್ರೊ. ಸುನಿತಾ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಂ.ಎನ್. ವನಿತ್ ಕುಮಾರ್ ಉಪಸ್ಥಿತರಿದ್ದರು.