ಭಾಗಮಂಡಲ, ಜು. 6: ಭಾಗಮಂಡಲದ ಅರಣ್ಯ ವಲಯಕ್ಕೆ ಸೇರಿದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡುವ ಮತ್ತು ಬೀಜ ಬಿತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 10 ಎಕ್ರೆ ಪ್ರದೇಶದಲ್ಲಿ ಸಸಿ ನೆಟ್ಟು ಬೀಜ ಬಿತ್ತನೆ ಮಾಡಲಾಯಿತು. ನಂತರ ಬ್ರಹ್ಮಗಿರಿ ಬೆಟ್ಟದಲ್ಲಿ ಪ್ರವಾಸಿಗರು ಎಸೆದಿರುವ ಪ್ಲಾಸ್ಟಿಕ್ ಬಾಟಲಿ ಮುಂತಾದ ಕಸಗಳನ್ನು ಆಯುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು. ಕಾರ್ಯಕ್ರಮಕ್ಕೆ ಭಾಗಮಂಡಲದ ಕೆ.ವಿ.ಜಿ. ತಾಂತ್ರಿಕ ವಿದ್ಯಾಲಯದ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದÀರ್ಭ ಬಿತ್ತನೆ ಕಾರ್ಯದಲ್ಲಿ ನಾರಾಯಣಾಚಾರ್, ಕೈಲಾಸ ಅಶ್ರಯದ ರವಿ, ವಲಯ ಅರಣ್ಯಾಧಿಕಾರಿ ಎಂ.ಎಸ್. ಚಂಗಪ್ಪ, ವನ್ಯಜೀವಿ ವಲಯದ ಮರಿಸ್ವಾಮಿ ಹಾಗೂ ಸಿಬ್ಬಂದಿಗಳಾದ ವಿಜಯಕುಮಾರ್, ಅಮೃತೇಶ್, ಸದಾನಂದ, ಕಾಳೇಗೌಡ, ಲೋಬೊ, ರವಿ, ಚಾಲಕ ದೇವಾನಂದ ಇನ್ನಿತರರು ಉಪಸ್ಥಿತರಿದ್ದರು.