ಗೋಣಿಕೊಪ್ಪಲು, ಜು. 6: ಆರ್ಟ್ ಆಫ್ ಲಿವಿಂಗ್ ವತಿಯಿಂದ ಹ್ಯಾಪಿನೆಸ್ ಕಾರ್ಯಕ್ರಮದಡಿ ಯೋಗಾಭ್ಯಾಸದ ನಂತರ ಅನುಪಮವಾದ ಉಸಿರಾಟದ ಪ್ರಕ್ರಿಯೆಯಾಗಿ ಸುದರ್ಶನ ಕ್ರಿಯೆ ಅಭ್ಯಾಸ ಶಿಬಿರ ಜುಲೈ 11 ರಿಂದ ಮೂರು ದಿನಗಳ ಕಾಲ ಗೋಣಿಕೊಪ್ಪ ಸೌಖ್ಯಹಾಲ್ನಲ್ಲಿ ನಡೆಯಲಿದೆ ಎಂದು ಆರ್ಟ್ ಆಫ್ ಲಿವಿಂಗ್ನ ಸಂಚಾಲಕ ಅಳಮೇಂಗಡ ಡಾನ್ ರಾಜಪ್ಪ ತಿಳಿಸಿದ್ದಾರೆ.
3 ದಿನಗಳ ಈ ಅಭ್ಯಾಸದಲ್ಲಿ ಯೋಗ, ಧ್ಯಾನ ಹಾಗೂ ಸುದರ್ಶನ ಕ್ರಿಯೆ ಅಭ್ಯಾಸ ನೀಡುವ ಮೂಲಕ ಒತ್ತಡ ರಹಿತ ಮನಸ್ಸು, ಸದೃಢ ದೇಹ ಹಾಗೂ ವಿಕಸಿತ ಜೀವನವನ್ನು ಸಾರ್ವಜನಿಕರು ಹೊಂದಿಕೊಳ್ಳಲು ಸಾಧ್ಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಸಿರಿನೊಳಗೆ ಅಡಗಿರುವ ಜೀವನದ ರಹಸ್ಯವನ್ನು ಅರ್ಥೈಸಿಕೊಳ್ಳಲು ಅಭ್ಯಾಸದಿಂದ ಮಾತ್ರ ಸಾಧ್ಯ, ಸಮಾಜದಲ್ಲಿ ವಯಸ್ಸು, ಲಿಂಗ, ಜಾತಿ, ಮತ ಧರ್ಮ ಬಿಟ್ಟು ಈ ಪ್ರಕ್ರಿಯೆ ಪುನಶ್ಚೇತನಗೊಂಡಿದೆ. 20 ದಶಲಕ್ಷ ಜನರು ಪ್ರಪಂಚದಲ್ಲಿ ಈ ಪ್ರಕ್ರಿಯೆಯಲ್ಲಿ ಸಂತೋಷ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸಮಾಜಕ್ಕೆ ಇದರ ಮಹತ್ವದ ಜಾಗೃತಿ ಮೂಡಿಸಲಾಗುವದು ಎಂದರು.
ಶಿಬಿರವು ಮದ್ಯಾಹ್ನ 2 ರಿಂದ ಸಂಜೆ 5 ರವರೆಗೆ, ಸಂಜೆ 5.30 ರಿಂದ 8.30 ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ 9945050217, 9449334880 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್ನ ಅಭಿವೃದ್ಧಿ ಸಮಿತಿ ಸದಸ್ಯೆ ಸವಿತಾ ನಂಜಪ್ಪ, ತರಬೇತುದಾರರು ಗಳಾದ ಲಕ್ಷ್ಮಿ, ಶಾಂತೆಯಂಡ ಮಧು ಮಾಚಯ್ಯ ಹಾಗೂ ಮುಕ್ಕಾಟೀರ ಗೀತಾ ಉಪಸ್ಥಿತರಿದ್ದರು.