ಕರಿಕೆ, ಜು. 5: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವದು ಸಹಜ. ಆದರೆ ಕರಿಕೆಯ ಸರ್ಕಾರಿ ಪ್ರೌಢ ಶಾಲೆÉಯಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡಬೇಕಾದಂತಹ ಪರಿಸ್ಥಿತಿ!!

ಈ ಶಾಲೆಯಲ್ಲಿ ಬೋರ್‍ವೆಲ್, ನಲ್ಲಿ, ಐದು ಲಕ್ಷ ವೆಚ್ಚದ ನೀರಿನ ಟ್ಯಾಂಕ್ ಇದೆ. ಆದರೆ ಮೋಟಾರ್ ಕೆಟ್ಟಿರುವದರಿಂದ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆಯಂತೆ. ಪರಿಣಾಮ ಶಾಲೆಯಿಂದ ಅರ್ಧ ಕಿ.ಮೀ. ನಷ್ಟು ದೂರದಲ್ಲಿರುವ ಸ್ಥಳೀಯ ಗ್ರಾ.ಪಂ. ಸದಸ್ಯ ರಮಾನಾಥ್ ಅವರ ಮನೆಯಿಂದ ವಿದ್ಯಾರ್ಥಿಗಳು ಬಿಂದಿಗೆ ಹಾಗೂ ಬಕೆಟ್‍ನಲ್ಲಿ ಶಾಲೆಗೆ ನೀರು ತರುವದು ಮಾಮೂಲಿಯಾಗಿದೆ. ಮೋಟಾರ್ ಕೆಟ್ಟಿರುವದರಿಂದ ನೀರಿನ ಕೊರತೆ ಎದುರಾಗಿದೆ ಎಂದು ವಿದ್ಯಾರ್ಥಿಗಳೇ ‘ಶಕ್ತಿ’ಯೊಂದಿಗೆ ಹೇಳಿದ್ದಾರೆ. ಪಾಠ ಕಲಿತು ಭವಿಷ್ಯ ರೂಪಿಸಿಕೊಳ್ಳಲು ಶಾಲೆಗೆ ಬರುವ ವಿದ್ಯಾರ್ಥಿಗಳು ಈ ರೀತಿ ನೀರು ತರುವ ಕಾಯಕದಲ್ಲಿ ತೊಡಗಿಸಿಕೊಂಡಿರುವದು ನಮ್ಮ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.!

- ಹೊದ್ದೆಟ್ಟಿ ಸುಧೀರ್