ಭಾಗಮಂಡಲ, ಜು. 6: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಯೋಗ ದಿನವನ್ನು ಅಚರಿಸಲಾಯಿತು. ಯೋಗ ಗುರು ಬಾಬಾರಾಮ್‍ದೇವ್ ಅವರ ಯೋಗ ಕೇಂದ್ರದಲ್ಲಿ ಅಭ್ಯಾಸ ನಡೆಸಿದ ಸಿದ್ದಾಪುರದ ಆಚಾರ್ಯ ವಿಶ್ವಮಿತ್ರ ವಿದ್ಯಾರ್ಥಿಗಳಿಗೆ ಯೋಗ ಅಭ್ಯಾಸ ನಡೆಸಿಕೊಟ್ಟರು. ಮಡಿಕೇರಿಯಲ್ಲಿ ಯೋಗ ತರಬೇತಿ ನಡೆಸುತ್ತಿರುವ ಮಹೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ತಿಳಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನಿರ್ದೇಶಕ ನಾರಾಯಣಾಚಾರ್ ವಹಿಸಿದರು. ಈ ಸಂದರ್ಭ ಪ್ರಾಂಶುಪಾಲೆ ಎಂ.ಕೆ. ಜಾನಕಿ, ಮುಖ್ಯ ಶಿಕ್ಷಕಿ ಪೂರ್ಣಿಮ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.