ಪೊನ್ನಂಪೇಟೆ, ಜು. 6: ವೀರಾಜಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಯಮುಡಿಯ ಎಸ್.ಎಸ್. ಸುರೇಶ್ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಅರಮೇರಿಯ ಕಳಂಚೇರಿ ಮಠದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸುರೇಶ್ ಅವರನ್ನು ಪುನರಾಯ್ಕೆಗೊಳಿಸಲಾಗಿದೆ.

ಉಳಿದಂತೆ ಉಪಾಧ್ಯಕ್ಷರಾಗಿ ನಾಲ್ಕೇರಿಯ ಎಸ್.ಬಿ. ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಕುಟ್ಟದ ಎಸ್. ಎಂ. ರಾಜೇಂದ್ರ ಪ್ರಸಾದ್ ಮತ್ತು ಖಜಾಂಚಿಯಾಗಿ ಮಾಯಮುಡಿಯ ಎಸ್.ಪಿ. ಮೋಹನಚಂದ್ರ ಅವರನ್ನು ಆಯ್ಕೆಗೊಳಿಸಲಾಯಿತು.

ಸಮಿತಿಯ ನಿರ್ದೇಶಕರಾಗಿ ಧನುಗಾಲದ ಎಸ್.ಪಿ. ಜಗದೀಶ್, ಕಾಕೂರಿನ ಎಸ್. ಆರ್. ತ್ಯಾಗರಾಜಪ್ಪ, ಬಾಳೆಲೆಯ ಎಸ್.ಎಸ್. ಶ್ರೀಕಂಠಪ್ಪ, ಟಿ.ಶೆಟ್ಟಿಗೇರಿಯ ಡಿ.ಎಸ್. ಲೋಕೇಶ್, ಎಸ್. ಎನ್. ಸಂತೋಷ್, ನಾಲ್ಕೇರಿಯ ಎನ್.ಎಂ ರಾಜೇಶ್, ಎಸ್.ಎಂ. ವಿನಯ್, ಎಸ್. ಪಾಪಯ್ಯ, ಎಸ್, ನಂಜಪ್ಪ, ಎಸ್. ನವೀನ, ಕುಟ್ಟದ ವಿ.ಪಿ. ವೆಂಕಟೇಶ್, ಪೊನ್ನಂಪೇಟೆಯ ಎಸ್. ಶಂಕರ್, ಎಸ್.ಎಸ್. ಮಹೇಶ್, ನೊಕ್ಯದ ವೇದ ಜಯರಾಜ್, ಶೋಭಾ ಬಸವಣ್ಣ, ಅಮ್ಮತ್ತಿ ಹೊಸೂರಿನ ಎಸ್.ವಿ. ಉಮೇಶ್, ಮಾಯಮುಡಿಯ ಕೆ.ಟಿ. ಬಿದ್ದಪ್ಪ ಹಾಗೂ ಕಾಕೂರಿನ ತಾರಾ ಬಸಪ್ಪಾಜಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ವೀರಾಜಪೇಟೆ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷರಾದ ಕೆ.ಎನ್. ಸಂದೀಪ್, ಉಪಾಧ್ಯಕ್ಷರಾದ ಎಸ್. ಈ ಮರಿಸ್ವಾಮಿ ಮತ್ತು ಕಾರ್ಯದರ್ಶಿಗಳಾದ ಕೆ.ಎಂ. ವಿಶ್ವನಾಥ್ ಅವರನ್ನು ಸಮಿತಿಯ ಖಾಯಂ ಆಹ್ವಾನಿತರಾಗಿ ಆಯ್ಕೆಗೊಳಿಸಲಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಎಸ್. ಸುರೇಶ್ ಅವರು ತಿಳಿಸಿದ್ದಾರೆ.

ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಮಹಾಸಭೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಎಸ್. ಎಸ್. ಮಹೇಶ್ ಸೇರಿದಂತೆ ಸಮಿತಿಯ ಪ್ರಮುಖರು ಹಾಜರಿದ್ದರು.