ಕುಶಾಲನಗರ, ಜು. 5: ಸಮಾಜದ ಸಮಸ್ಯೆಗಳಿಗೆ ರೋಟರಿ ಮೂಲಕ ಪರಿಹಾರ ಕಂಡುಹಿಡಿಯಲಾಗುತ್ತಿದೆ ಎಂದು 3181 ರೋಟರಿ ಜಿಲ್ಲೆಯ ಹಿಂದಿನ ಸಾಲಿನ ರಾಜ್ಯಪಾಲ ಡಾ.ಆರ್.ಎಸ್.ನಾಗಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ರೈತ ಸಹಕಾರ ಭವನದಲ್ಲಿ ರೋಟರಿ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ರೋಟರಿ ದತ್ತಿನಿಧಿ ಸಹಾಯ ಹಸ್ತದೊಂದಿಗೆ ರೋಟರಿ ಪದಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆ ಮೂಲಕ ತಳಮಟ್ಟದ ಜನರಿಗೆ ಸಹಾಯಹಸ್ತ ನೀಡುವ ಅವಕಾಶವಿದೆ ಎಂದ ನಾಗಾರ್ಜುನ ಅವರು, ಕುಶಾಲನಗರ ರೋಟರಿ ಅಮೇರಿಕಾದ 23 ರೋಟರಿ ಸಂಸ್ಥೆಗಳ ಸಹಯೋಗದೊಂದಿಗೆ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ರೂ 75 ಲಕ್ಷ ವೆಚ್ಚದಲ್ಲಿ ವೈದ್ಯಕೀಯ ಸಲಕರಣೆಗಳನ್ನು ನೀಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ನಂತರ ಸಮಾರಂಭದಲ್ಲಿ 2017-18ರ ನೂತನ ಪದಾಧಿಕಾರಿಗಳ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭ ಕುಶಾಲನಗರ ವ್ಯಾಪ್ತಿಯಲ್ಲಿ ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಪಾತ್ರವಾದ ಶಾಂತಿನಿಕೇತನ ಪ್ರೌಢಶಾಲೆಗೆ ರೋಟರಿ ರೋಲಿಂಗ್ ಶೀಲ್ಡ್ ವಿತರಿಸಲಾಯಿತು.

4 ಮಂದಿ ನೂತನ ಸದಸ್ಯರನ್ನು ರೋಟರಿಗೆ ಸೇರ್ಪಡೆ ಗೊಳಿಸಲಾಯಿತು.

ಪದಗ್ರಹಣ

ನೂತನ ಸಾಲಿನ ಅಧ್ಯಕ್ಷರಾಗಿ ಎನ್.ಜಿ. ಪ್ರಕಾಶ್, ಉಪಾಧ್ಯಕ್ಷರಾಗಿ ಕೆ.ಎಂ. ಜೇಕಬ್, ಕಾರ್ಯದರ್ಶಿಯಾಗಿ ಸಿ.ಬಿ. ಹರೀಶ್, ಖಜಾಂಚಿಯಾಗಿ ರಿಚರ್ಡ್ ಡಿಸೋಜ ಅವರೊಂದಿಗೆ ವಿವಿಧ ವಿಭಾಗಗಳ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಸಹ ಕಾರ್ಯದರ್ಶಿಯಾಗಿ ಜಾನ್ ಪುಲಿಕಲ್, ಸಾರ್ಜೆಂಟ್ ಆರ್ಮ್‍ಸ್ ಸಂಜು ಬೆಳ್ಯಪ್ಪ, ಕ್ಲಬ್ ಸರ್ವೀಸ್‍ಗೆ ಎಂ.ಜಿ. ಗಂಗಾಧರ್, ಎ.ಎ. ಚಂಗಪ್ಪ ಅವರು ಇಂಟರ್‍ನ್ಯಾಷನಲ್ ಸರ್ವೀಸ್, ರವೀಂದ್ರ ರೈ ಕಮ್ಯುನಿಟಿ ಸರ್ವೀಸ್, ಎಲ್. ಸಂತೋಷ್ ಯುವ ವಿಭಾಗ ಪ್ರತಿನಿಧಿಯಾಗಿ ನೇಮಿಸಲಾಗಿದೆ.

ರೋಟರಿ ಫೌಂಡೇಶನ್ ನಿರ್ದೇಶಕರಾಗಿ ಪ್ರೇಮ್‍ಚಂದ್ರನ್, ಪೋಲಿಯೋ ಪ್ಲಸ್‍ಗೆ ಡಾ.ಧರಣೇಂದ್ರ, ಆರತಿ ಹೆಚ್.ಶೆಟ್ಟಿ ಅವರು ಬುಲೆಟಿನ್ ಎಡಿಟರ್, ಲಿಟರಸಿ ವಿಭಾಗಕ್ಕೆ ನಳಿನಿ ಜವಾಹರ್ ಮತ್ತಿತರರು 2017-18 ರ ಸಾಲಿನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.

ವೇದಿಕೆಯಲ್ಲಿ ಹಿಂದಿನ ಸಾಲಿನ ಅಧ್ಯಕ್ಷ ಎ.ಎ.ಚಂಗಪ್ಪ, ಕಾರ್ಯದರ್ಶಿ ಹಾಗೂ ಪ್ರಸಕ್ತ ಸಾಲಿನ ಅಧ್ಯಕ್ಷ ಎನ್.ಜಿ. ಪ್ರಕಾಶ್, ನೂತನ ಕಾರ್ಯದರ್ಶಿ ಸಿ.ಬಿ. ಹರೀಶ್, ಸಹಾಯಕ ರಾಜ್ಯಪಾಲ ಎನ್. ಮಹೇಶ್‍ಕುಮಾರ್, ವಲಯ ಪ್ರಮುಖ ಕೆ.ಎಸ್. ಮೋಹನ್‍ರಾಮ್ ಇದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ರೋಟರಿ ಪ್ರಮುಖರಾದ ಬಿ.ಜಿ.ಅನಂತಶಯನ, ಹೆಚ್.ಟಿ.ಅನಿಲ್ ಮತ್ತು 3181 ವ್ಯಾಪ್ತಿಯ ರೋಟರಿ ಅಧ್ಯಕ್ಷರು, ಪದಾಧಿಕಾರಿಗಳು, ಕುಶಾಲನಗರ ರೋಟರಿ ಹಿರಿಯ ಸದಸ್ಯರಾದ ಡಾ.ಹರಿ ಎ ಶೆಟ್ಟಿ, ಎಸ್.ಕೆ.ಸತೀಶ್, ಆರ್.ಎಸ್. ಕಾಶೀಪತಿ, ಶೋಭಾ ಸತೀಶ್, ಆರತಿ ಎಚ್ ಶೆಟ್ಟಿ, ಡಾ.ಧರಣೇಂದ್ರ, ರಂಗಸ್ವಾಮಿ, ರವಿ ರೈ, ಎಲ್. ಸಂತೋಷ್, ಎಂ.ಜಿ. ಗಂಗಾಧರ್, ಕೆ.ಎಂ.ಜೇಕಬ್, ರಿಚರ್ಡ್ ಡಿಸೋಜ ಮತ್ತಿತರರು ಇದ್ದರು.