ಮೇಲ್ಮನೆ ಸದಸ್ಯೆ - ನಟಿ ತಾರಾ

ಮಡಿಕೇರಿ, ಜು. 5: ಭಾರತದಂತಹ ಮಹಾನ್ ಸಾಂಸ್ಕøತಿಕ ದೇಶದಲ್ಲಿ ನಮ್ಮ ಸ್ತ್ರೀ ಸಮುದಾಯದಲ್ಲಿ ಹೆಣ್ಣನ್ನು ಆಕೆಯ ಗುಣದಿಂದ ಅಳೆಯುವದು ಸಾಧ್ಯವೆಂದು ಕರ್ನಾಟಕ ಮೇಲ್ಮನೆ ಸದಸ್ಯೆ ಹಾಗೂ ಹಿರಿಯ ಚಲನಚಿತ್ರ ನಟಿ ತಾರಾ ಅವರು ಅಭಿಪ್ರಾಯಪಟ್ಟರು.

ನಗರಕ್ಕೆ ಭೇಟಿ ನೀಡಿದ ಸಂದರ್ಭ ಮತ್ತೋರ್ವ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕಚೇರಿಯಲ್ಲಿ ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿದ ಅವರು, ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ ಪಾಶ್ಚಾತ್ಯ ಬದುಕನ್ನು ಭಾರತೀಯ ನಾರಿಯರು ಒಪ್ಪಿಕೊಳ್ಳಲು ಅಸಾಧ್ಯವೆಂದು ವ್ಯಾಖ್ಯಾನಿಸಿದರು. ನಮ್ಮ ಹಿರಿಯರು ವಿಶಾಲ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ಮಾತ್ರ ಸ್ಥಾನದೊಂದಿಗೆ, ದೇಶವನ್ನು ಕೂಡ ಅದೇ ಪೂಜ್ಯ ಭಾವನೆಯಿಂದ ಕಂಡಿರುವ ಪರಿಣಾಮ ಸಮಗ್ರ ವಿಶ್ವದಲ್ಲಿ ಭಾರತೀಯ ಸಂಸ್ಕøತಿಯನ್ನು ಎಲ್ಲರೂ ಗೌರವದಿಂದ ಒಪ್ಪಿಕೊಂಡಿದ್ದಾಗಿ ಅವರು ನೆನಪಿಸಿದರು.

ಸ್ತ್ರೀ ಸ್ವಾತಂತ್ರ್ಯ ಹಾಗೂ ಆಕೆಗೆ ಸಮಾನ ಹಕ್ಕು ಬಗ್ಗೆ ತಾನು ಕೂಡ ಶೇ. 50 ಮೀಸಲಾತಿ ಲಭಿಸಬೇಕೆಂಬ ಬೇಡಿಕೆಗೆ ಅಪೇಕ್ಷಿಸುತ್ತಿದ್ದು, ಆ ಮಾತ್ರದಿಂದ ಹೆಣ್ಣಿನ ಸಾಮಥ್ರ್ಯ ಅಳೆಯದೆ ಆಕೆಯ ಗುಣ ಸಂಪನ್ನತೆಯನ್ನು ಎಲ್ಲರೂ ಗೌರವಿಸಬೇಕೆಂದು ಮಾರ್ನುಡಿದರು.

ಎಲ್ಲಿ ಪುರುಷ ಸಮಾಜ ಹೇಳಿದ್ದನ್ನು ಹೆಣ್ಣು ಮಾಡಿ ತೋರಿಸುತ್ತಾಳೋ ಅಂತಹ ಸಂದರ್ಭದಲ್ಲಿ ಆಕೆಗೆ ಹೆಚ್ಚಿನ ಗೌರವ ಸಲ್ಲುತ್ತದೆ ಎಂದ ತಾರಾ, ಈ ದಿಸೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ನಾರಿಯರು ಕಾರ್ಯೋನ್ಮುಖರಾಗುವ ಮೂಲಕ ಭಾರತದ ಸಂಸ್ಕøತಿಯ ಏಳಿಗೆಗೆ ಶ್ರಮಿಸುವಂತೆ ಸಲಹೆಯಿತ್ತರು.

ತಾನು ಚಲನಚಿತ್ರರಂಗದಲ್ಲಿ ವೃತ್ತಿ ಜೀವನ ಕಂಡುಕೊಳ್ಳುವ ಮುನ್ನ, ಮನೆಯಿಂದಲೇ ಆಕ್ಷೇಪವಿದ್ದುದನ್ನು ನೆನಪಿಸಿಕೊಂಡ ಅವರು, ನಮ್ಮ ಹಾದಿಗೆ ಗುಣ ಆಸರೆಯಾಗಲಿದೆ ಎಂದರಲ್ಲದೆ, ಇಲ್ಲಿ ಕಲಾತ್ಮಕ ಸಿನಿಮಾ ತನಗೆ ಶಾಲೆಯಾಗಿ ಮತ್ತು ಧನಾತ್ಮಕ ಸಿನಿಮಾಗಳು ತರಗತಿಯಂತೆ ಪಾಠ ಕಲಿಸಿದ್ದಾಗಿ ಬಿಚ್ಚು ನುಡಿಯಾಡಿದರು.

ಆ ಮೂಲಕ ಬಿಜೆಪಿಯಂತಹ ಪಕ್ಷ ಗುರುತಿಸಿ ಮೇಲ್ಮನೆ ಸದಸ್ಯ ಸ್ಥಾನದೊಂದಿಗೆ ಸಾಕಷ್ಟು ಹೊಣೆಗಾರಿಕೆ ನೀಡಿದ್ದಾಗಿ ಹೆಮ್ಮೆ ವ್ಯಕ್ತಪಡಿಸಿದರು.

ಭಾರತದ ಭವಿಷ್ಯಕ್ಕಾಗಿ ದೇಶದ ನಾರಿಯರು ಬಿಜೆಪಿಯಂತಹ ಸಾಂಸ್ಕøತಿಕ ಹಿನ್ನಲೆಯ ಧರ್ಮಾಧಾರಿತ ರಾಜಕೀಯವನ್ನು ಬೆಂಬಲಿಸಬೇಕೆಂದು ಪ್ರತಿಪಾದಿಸಿದ ಅವರು, ಜಾತಿ ಜಾತಿಗಳ ನಡುವೆ ವಿಘಟನೆಗೊಳಿಸಿ ಅವಕಾಶವಾದದ ರಾಜಕಾರಣವನ್ನು ಪಕ್ಷ ಎಂದಿಗೂ ಒಪ್ಪಿಕೊಳ್ಳದು ಎಂದು ಮಾರ್ನುಡಿದರು.

ಅಭಿವೃದ್ಧಿಗಾಗಿಯೇ ಬದುಕು ಮುಡಿಪಿಟ್ಟಿರುವ ಸ್ವಾತಂತ್ರ್ಯ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಪ್ರತಿಪಾದಿಸಿದ ತಾರಾ, ಸಾಮಾನ್ಯ ಕುಟುಂಬದಿಂದ ಬಂದವರ ನಾಯಕತ್ವ ಗುಣವನ್ನು ಜಗತ್ತು ಗೌರವದಿಂದ ಸ್ವೀಕರಿಸುತ್ತಿರುವದು ಸಮಗ್ರ ಭಾರತವಾಸಿಗಳಿಗೆ ಹೆಮ್ಮೆಯಲ್ಲವೇ ಎಂದು ಮರು ಪ್ರಶ್ನಿಸಿದರು. ಈ ಸಂದರ್ಭ ಎಂ.ಪಿ. ಸುಬ್ರಮಣಿ ಹಾಗೂ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಹಾಜರಿದ್ದರು.