ಮಡಿಕೇರಿ, ಜು. 8: ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ ತಾ. 23ರಂದು ಕೊಹಿನೂರು ರಸ್ತೆಯ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ಅಧ್ಯಕ್ಷ ಬಿ.ಜಿ. ಅನಂತ ಶಯನ ತಿಳಿಸಿದ್ದಾರೆ.ಪರಿಷತ್ತಿನ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಗಾನ, ಕವನ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ಹೇಳಿದ್ದಾರೆ. ಅಂದು ಬೆಳಿಗ್ಗೆ ಸಂಸ್ಥೆಯ ಸದಸ್ಯರ ಸಾಧನೆ ಗುರುತಿಸಿ ಸನ್ಮಾನ ಹಾಗೂ ಪೊನ್ನಂಪೇಟೆಯ ವೈದ್ಯ ಡಾ. ಕಾಳಿಮಾಡ ಕುಶಾಲಪ್ಪ ಶಿವಪ್ಪ ಅವರಿಂದ ಗಾಯನ ಕಾರ್ಯಕ್ರಮವಿದೆ. ಮುಖ್ಯ ಅತಿಥಿಗಳಾಗಿ ಬೆಸೂರು ಮೋಹನ್ ಪಾಳೇಗಾರ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಭಾಗವಹಿಸಲಿದ್ದಾರೆ.

ಬಳಿಕ ಸನ್ಮಾನ ಹಾಗೂ ಜಾನಪದೀಯ ಶೈಲಿಯ ಕವಿಗೋಷ್ಠಿ ನಡೆಯಲಿದೆ.

ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್, ಜಾನಪದ ಪರಿಷತ್ ತಾಲೂಕು ಹಾಗೂ ಹೋಬಳಿ ಅಧ್ಯಕ್ಷರುಗಳಾದ ಎಚ್.ಟಿ. ಅನಿಲ್, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಚಂದ್ರಮೋಹನ್ ಹಾಗೂ ಮುರಳೀಧರ್ ಭಾಗವಹಿಸಲಿದ್ದಾರೆ.

ಕವನ ವಾಚಿಸುವವರು ಕಿಗ್ಗಾಲು ಗಿರೀಶ್, 9141395496 ಅಥವಾ ಕೌಶಲ್ಯ, 9108155355 ಇವರುಗಳಲ್ಲಿ ತಾ. 15ರೊಳಗೆ ಹೆಸರು ನೀಡಬಹುದು. ಕವನ ಯಾವ ಭಾಷೆಯಲ್ಲಾದರೂ ಆಗಬಹುದು.