ಸೋಮವಾರಪೇಟೆ, ಜು. 8: ಶರಣ ಸಾಹಿತ್ಯ ಪರಿಷತ್ ಯಾವದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಎಲ್ಲಾ ಧರ್ಮದವರನ್ನೂ ಒಗ್ಗೂಡಿಸಿ ಸಾಹಿತ್ಯವನ್ನು ಪಸರಿಸುವ ಕಾಯಕವನ್ನು ಪರಿಷತ್ ಮಾಡುತ್ತದೆ ಎಂದು ಪರಿಷತ್‍ನ ಗೌರವಾಧ್ಯಕ್ಷರೂ ಆಗಿರುವ ಕಲ್ಲುಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಆಶ್ರಯದಲ್ಲಿ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸ ಲಾಗಿದ್ದ ಪರಿಷತ್‍ನ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಸವಣ್ಣನವರ ಕಾಲದಲ್ಲಿಯೇ ಮಹಿಳೆಯರಿಗೆ ಸಮಾನತೆಯ ಸ್ಥಾನಮಾನ ನೀಡುವದರೊಂದಿಗೆ ಶರಣ ಸಾಹಿತ್ಯದ ಯುಗ ಪ್ರಾರಂಭಗೊಂಡಿತು. ಮಹಿಳೆಯರು ಅಂದಿನಿಂದಲೇ ಸಾಹಿತ್ಯ ರಚನೆಗೆ ವಿಶೇಷ ಆಸಕ್ತಿ ತಳೆದಿದ್ದರು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಪರಿಷತ್ ವತಿಯಿಂದ ಈಗಾಗಲೇ ಸದÀಸ್ಯತ್ವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈಗ ಸಮಿತಿಯಲ್ಲಿರುವ ಪ್ರತಿಯೋರ್ವ ಸದಸ್ಯರು ತಲಾ ಇಬ್ಬರು ನೂತನ ಸದಸ್ಯರನ್ನು ಪರಿಷತ್ತಿಗೆ ಸೇರ್ಪಡೆಗೊಳಿ ಸಬೇಕೆಂದು ಮನವಿ ಮಾಡಿದರು.

ಪರಿಷತ್ತಿನ ಕಾರ್ಯ ಯೋಜನೆ ಯಂತೆ ತಾ. 14ರಂದು ಶನಿವಾರಸಂತೆ, ತಾ. 28 ರಂದು ಕಲ್ಲುಮಠದ ಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗುವದು. ಆಗಸ್ಟ್ 29 ರಂದು ಜಿಲ್ಲೆಯ ಕೊಡ್ಲಿಪೇಟೆ, ಕುಶಾಲನಗರ, ವೀರಾಜಪೇಟೆಯಲ್ಲಿ ಏಕಕಾಲದಲ್ಲಿ ವಚನ ಸಾಹಿತ್ಯ ಕಾರ್ಯಕ್ರಮವನ್ನು ನಡೆಸಲಾಗುವದು. ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸ ಲಾಗಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಪರಿಷತ್‍ನ ಕಾರ್ಯದರ್ಶಿ ಹೆಚ್.ಎಸ್. ಪ್ರೇಮ್‍ನಾಥ್, ಖಜಾಂಚಿ ಡಿ.ಪಿ. ಸೋಮಪ್ಪ ಉಪಸ್ಥಿತರಿದ್ದರು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಮಹಾಸಭಾದ ಕಾರ್ಯದರ್ಶಿ ಜಿ.ಎಂ. ಕಾಂತರಾಜ್, ಸಿ.ವಿ. ವಿಶ್ವನಾಥ್, ಕೆ.ಎನ್. ಸಂದೀಪ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಪಿ. ಮಹದೇವಪ್ಪ, ಎಸ್.ಎಸ್. ಸುರೇಶ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಸೇರಿದಂತೆ ಇತರರು ಉಪಸ್ಥಿತರಿದ್ದರು.