ಮಡಿಕೇರಿ, ಜು. 8: ಮಡಿಕೇರಿ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆಯಾಗಿ ಲತಾ ಚೆಂಗಪ್ಪ ಅಧಿಕಾರ ಸ್ವೀಕರಿಸಿದರು. ಪೂರ್ವ ಅಧ್ಯಕ್ಷೆ ನಮಿತಾ ರೈ ಅವರು ನಿನ್ನೆ ನಡೆದ ಸಮಾರಂಭವೊಂದರಲ್ಲಿ ಅಧಿಕಾರ ಹಸ್ತಾಂತರಿಸಿದರು.

ಮಲ್ಲಿಗೆ ಪೈ ಅವರು ಪದವಿ ಪ್ರದಾನ ಮಾಡಿದರು. ಡಾ. ಜಯಲಕ್ಷ್ಮಿ ಪಾಟ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೂತನ ಕಾರ್ಯದರ್ಶಿಯಾಗಿ ನಿಶಾ ಮೋಹನ್ ಅಧಿಕಾರ ಸ್ವೀಕರಿಸಿದರು. ಹಿಂದಿನ ಸಾಲಿನ ಕಾರ್ಯದರ್ಶಿ ಡಾ. ಶುಭಾ ರಾಜೇಶ್ ವರದಿ ವಾಚಿಸಿದರು. ಡಾ. ಮೋಹನ್ ಅಪ್ಪಾಜಿ ಸುದ್ದಿ ಸಂಚಿಕೆ ಬಿಡುಗಡೆ ಮಾಡಿದರು.

ರೂಪಾ ಸುಮಂತ್, ಪೂರ್ಣಿಮಾ, ಶಫಾಲಿ, ಉಮಾ ಗೌರಿ, ಲಕ್ಷ್ಮೀ ಭಟ್ ಪರಿಚಯ ಹಾಗೂ ಪ್ರಾರ್ಥನೆ ಮಾಡಿದರು.